Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ – ಪಾಸ್​ಪೋರ್ಟ್ ರದ್ದು ಕೋರಿ MEAಗೆ ಪತ್ರ ಬರೆದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ – ಪಾಸ್​ಪೋರ್ಟ್ ರದ್ದು ಕೋರಿ MEAಗೆ ಪತ್ರ ಬರೆದ ಎಸ್ಐಟಿ..!

ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಪಾಸ್​ಪೋರ್ಟ್ ರದ್ದು ಮಾಡಲು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ (ಎಂಇಎ) ಎಸ್ಐಟಿ ಪತ್ರ ಬರೆದಿದೆ. ಲುಕೌಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಟ್ಯಾಗ್ ಮಾಡಿ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅತ್ಯಾಚಾರ ಆರೋಪ ಎದುರಿಸುತ್ತಿರುವ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈಗಾಗಲೇ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದರೂ ಇದುವರೆಗೂ ಪ್ರಜ್ವಲ್ ಸುಳಿವು ದೊರೆತಿಲ್ಲ.

ಶತಾಯಗತಾಯ ಬಂಧಿಸಬೇಕೆಂದು ಪಣತೊಟ್ಟಿರುವ ಎಸ್ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳ ಹಿಂದಷ್ಟೇ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್​ ಪಡೆದಿದ್ದರು‌‌. ಇದೀಗ, ರಾಜತಾಂತ್ರಿಕ ಪಾಸ್ ಪೋರ್ಟ್​ನಡಿ ವಿದೇಶಕ್ಕೆ ಹಾರಿರುವ ಪ್ರಜ್ವಲ್ ಪಾಸ್​ಪೋರ್ಟ್ ರದ್ದು ಕೋರಿ SIT ಪತ್ರ ಬರೆದು ಮನವಿ ಮಾಡಿದೆ.

ಇನ್ನು, ಪ್ರಜ್ವಲ್​​ ರೇವಣ್ಣಗೆ ವಾಪಸ್ ಬರದೇ ವಿಧಿ ಇಲ್ಲದಂತಾಗಿದೆ. ಒಂದು ವೇಳೆ ಪಾಸ್​ ಪೋರ್ಟ್​ ರದ್ದಾದ್ರೆ ವಿದೇಶ ತೊರೆಯಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕಂಡಲ್ಲಿ ಅರೆಸ್ಟ್ ಆಗೋ ಸಂಕಷ್ಟಕ್ಕೆ ಪ್ರಜ್ವಲ್ ಸಿಲುಕಲಿದ್ದಾರೆ. ಮತ್ತೊಂದೆಡೆ ವಾಪಸ್ ಬರುವಂತೆ ಚಿಕ್ಕಪ್ಪ ಹೆಚ್​ಡಿ ಕುಮಾರಸ್ವಾಮಿಯವರು ಮನವಿ ಮಾಡಿದ್ದಾರೆ. ಕುಟುಂಬದ ಗೌರವ ಉಳಿಸಲು 48 ಗಂಟೆಗಳಲ್ಲಿ ವಾಪಸ್​ ಬರುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ :  ದೀಪಿಕಾ ಪಡುಕೋಣೆ ಬಾಡಿಗೆ ತಾಯ್ತನದ ಗಾಸಿಪ್​ಗೆ ಬ್ರೇಕ್ : ಬೇಬಿ ಬಂಪ್ ವಿಡಿಯೋ ವೈರಲ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here