ಮೈಸೂರು : ಪ್ರಜ್ವಲ್ ರೇವಣ್ಣ ಕೇಸ್ನಿಂದ BJP-JDS ಮೈತ್ರಿಗೆ ಯಾವುದೇ ಭಂಗವಿಲ್ಲ. ಪರಿಷತ್ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ. 6 ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಜೆಡಿಎಸ್ಗೆ ಕೊಡ್ತಿದ್ದೇವೆ. ಕೆಲ ದಿನಗಳಲ್ಲೇ ಜೆ.ಪಿ ನಡ್ಡಾ ಅಭ್ಯರ್ಥಿಗಳ ಲಿಸ್ಟ್ ಅನೌನ್ಸ್ ಮಾಡ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಪಾರದರ್ಶಕ ತನಿಖೆ ಆಗ್ಬೇಕು. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯದೇ ಇದ್ರೆ ಸತ್ಯ ಹೊರಬರಲ್ಲ. ಇದೇ ಕಾರಣಕ್ಕೆ CBI ತನಿಖೆ ಆಗಲಿ ಎಂದು ಆಗ್ರಹ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಗೆಲುವಿನ ಭರವಸೆ ವ್ಯಕ್ತಪಡಿಸಿ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಈ ಮೂಲಕ ಕೇಂದ್ರದಲ್ಲಿ ಮೋದಿಯವರು ಮತ್ತೆ ಅಧಿಕಾರಕ್ಕೆ ಬರ್ತಾರೆ. ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ..? ನರೇಂದ್ರ ಮೋದಿಯವರು ಪ್ರಧಾನಿ ಆಗೋದು ಅಷ್ಟೇ ಸತ್ಯ. ಈಗಾಗಲೇ ಮುಂದಿನ ಐದು ವರ್ಷ ಏನ್ ಮಾಡಬೇಕು ಎನ್ನುವ ಚರ್ಚೆ ಆಗ್ತಿದೆ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣನನ್ನ ಹುಡುಕಿಕೊಟ್ಟರೆ 1 ಲಕ್ಷ ಬಹುಮಾನ – ಭರ್ಜರಿ ಆಫರ್ ನೀಡಿದ ಜನತಾ ಪಕ್ಷ..!