Download Our App

Follow us

Home » ಅಪರಾಧ » ಪ್ರಜ್ವಲ್​ ರೇವಣ್ಣ ಮತ್ತೆ SIT ಕಸ್ಟಡಿಗೆ..!

ಪ್ರಜ್ವಲ್​ ರೇವಣ್ಣ ಮತ್ತೆ SIT ಕಸ್ಟಡಿಗೆ..!

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್‌ ರೇವಣ್ಣ ಅವರಿಗೆ SIT ಡ್ರಿಲ್‌ ಮುಂದುವರಿದಿದೆ. ಹೆಚ್ಚಿನ ವಿಚಾರಣೆಗಾಗಿ ಇಂದು ಪ್ರಜ್ವಲ್‌ರನ್ನು SIT ಮತ್ತೆ ವಶಕ್ಕೆ ಪಡೆದಿದೆ.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ SITಯು ಮಾಹಿತಿ ಕಲೆ ಹಾಕಿ ಸಾಕ್ಷ್ಯಾಧಾರ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಆದರೆ ಪ್ರಜ್ವಲ್‌ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ವಿಚಾರಣೆಗೆ ಕೊಂಚ ಹಿನ್ನಡೆಯಾಗಿದೆ.

ಪ್ರಜ್ವಲ್​ಗೆ SIT ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು. ಆದರೆ ಇದೀಗ ಕೋರ್ಟ್ ಪ್ರಜ್ವಲ್​ನ್ನು ಇನ್ನೂ 5 ದಿನ SIT ಕಸ್ಟಡಿಗೆ ನೀಡಿದೆ. ಜನಪ್ರತಿನಿಧಿಗಳ ಕೋರ್ಟ್​ ಪ್ರಜ್ವಲ್​ನ್ನು ಜೂನ್​ 10 ರವರೆಗೆ SIT ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಪ್ರಜ್ವಲ್​​ ರೇವಣ್ಣ ಎಸ್​ಐಟಿ ಕಸ್ಟಡಿ ಇಂದು ಅಂತ್ಯ – ಮಾಜಿ ಸಂಸದ ಜೈಲಿಗಾ? ಮತ್ತೆ SIT ಕಸ್ಟಡಿಗಾ?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here