ಇಂದು ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಸೇವಕನ 3ನೇ ಅವಧಿ ಇಂದಿನಿಂದ ಶುರುವಾಗಲಿದ್ದು, ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನಕ್ಕೆ ಸಿದ್ಧತೆ ನಡೆದಿದೆ.
ಇಂದು ಸಂಜೆ 7.15ಕ್ಕೆ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿಗೆ ಪ್ರತಿಜ್ಞಾವಿಧಿಯನ್ನ ಬೋಧಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ 9,000 ಅತಿಥಿಗಳಿಗೆ ಆಹ್ವಾನಿಸಿದ್ದು, ಈ ಐಸಿಹಾಸಿಕ ಕ್ಷಣಕ್ಕೆ ಗಣ್ಯಾತೀಗಣ್ಯರು ಸಾಕ್ಷಿಯಾಗ್ತಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ, ಮಾಲ್ಡೀವ್ಸ್‌ನ ಮೊಹಮ್ಮದ್ ಮುಯಿಝು, ಭೂತಾನ್‌ನ ತ್ಶೆರಿಂಗ್ ಟೊಬ್ಗೇ, ನೇಪಾಳದ ಪುಷ್ಪ ಕಮಲ್ ದಹಲ್, ಮಾರಿಷಸ್‌ನ ಪಿಕೆ ಜುಗ್ನಾಥ್ ಭಾಗಿಯಾಗುವ ಸಾಧ್ಯತೆಯಿದೆ. ಮಾಜಿ ಪ್ರಧಾನಿ ದೇವೇಗೌಡರು, ನಿತೀಶ್ ಕುಮಾರ್, ನಾಯ್ಡು ಉಪಸ್ಥಿತಿಯಲ್ಲಿರಲ್ಲಿರಲಿದ್ದಾರೆ. ಹಾಗೆಯೇ ಎಲ್ಲಾ NDA ನಾಯಕರು ಪ್ರಮಾಣವಚನದಲ್ಲಿ ಭಾಗಿಯಾಗ್ತಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ : ಇಂದು ಭಾರತ-ಪಾಕ್ ನಡುವೆ ಮಹಾ ಕದನ – ಪಂದ್ಯ ಎಷ್ಟು ಗಂಟೆಗೆ ಆರಂಭ?