Download Our App

Follow us

Home » ಸಿನಿಮಾ » ಲವರ್ ಬಾಯ್ ಗೆಟಪ್‌ನಲ್ಲಿ ಪ್ರಭಾಸ್.. “ದಿ ರಾಜಾಸಾಬ್” ಗ್ಲಿಂಪ್ಸ್ ಔಟ್ – ಸಿನಿಮಾ ರಿಲೀಸ್ ಯಾವಾಗ?

ಲವರ್ ಬಾಯ್ ಗೆಟಪ್‌ನಲ್ಲಿ ಪ್ರಭಾಸ್.. “ದಿ ರಾಜಾಸಾಬ್” ಗ್ಲಿಂಪ್ಸ್ ಔಟ್ – ಸಿನಿಮಾ ರಿಲೀಸ್ ಯಾವಾಗ?

ಗೆಲುವಿನ ಲಯಕ್ಕೆ ಮರಳಿರುವ ಟಾಲಿವುಡ್‌ ನ ಡಾರ್ಲಿಂಗ್, ನಟ ಪ್ರಭಾಸ್‌ ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಗ್ಲಿಂಪ್ಸ್‌ ಮೂಲಕ ಮತ್ತೆ ಫ್ಯಾನ್ಸ್‌ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಹೌದು, ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ “ದಿ ರಾಜಾಸಾಬ್” ಚಿತ್ರದ ಮೂಲಕ ಫ್ಯಾನ್ಸ್ ಮುಂದೆ ಬರಲು ಪ್ರಭಾಸ್‌ ಸಜ್ಜಾಗಿದ್ದಾರೆ.

“ದಿ ರಾಜಾಸಾಬ್” ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಈ ಚಿತ್ರದ ಸಣ್ಣ ಝಲಕ್‌ಅನ್ನು ಚಿತ್ರತಂಡ ನಿನ್ನೆ ಬಿಡುಗಡೆ ಮಾಡಿದೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು, ಗಿಂಪ್ಸ್ ರಿಲೀಸ್ ಮಾಡುವುದ ಜೊತೆಗೆ ತೆರೆ ಮೇಲೆ “ದಿ ರಾಜಾಸಾಬ್” ನೋಡಲು ಕಾಯ್ತಿದ್ದ ಫ್ಯಾನ್ಸ್​ಗೆ ನಿರ್ಮಾಪಕರು ಗುಡ್ ನ್ಯೂಸ್ ಕೊಟ್ಟಿದ್ದಾರೆ. “ದಿ ರಾಜಾಸಾಬ್” ಚಿತ್ರ 2025 ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ ಎಂದು ವಿಡಿಯೋದಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ಮೂಲಕ ಪ್ರಭಾಸ್ ಅಭಿಮಾನಿಗಳಿಗೆ ರಾಜಾ ಸಾಬ್ ನಿರ್ಮಾಪಕರು ಡಬಲ್ ಟ್ರೀಟ್ ನೀಡಿದ್ದಾರೆ. ‘ಮಾಸು.. ಕ್ಲಾಸ್.. ಸ್ವಾಗು.. ಅನ್‌ಲಿಮಿಟೆಡ್ ಎಂಟರ್‌ಟೈನ್‌ಮೆಂಟ್‌’ ಎಂದು ವಿಡಿಯೋಗೆ ಟೈಟಲ್​ ನೀಡಲಾಗಿದ್ದು, ಈ ಸಿನಿಮಾ ಕೂಡ ಸೂಪರ್​ ಹಿಟ್ ಪಕ್ಕಾ ಎನ್ನಲಾಗ್ತಿದೆ.

ಈಗಾಗಲೇ ಶೇ. 40% ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮತ್ತೊಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. ಎಸ್‌ಎಸ್ ಥಮನ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ರಾಮ್ ಲಕ್ಷ್ಮಣ್ ಮಾಸ್ಟರ್ಸ್ ಮತ್ತು ಕಿಂಗ್ ಸೊಲೊಮನ್ ಫೈಟ್ ಕೊರಿಯೋಗ್ರಫಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಭರ್ಜರಿ ಆಕ್ಷನ್‌ ನಿರೀಕ್ಷಿಸಬಹುದಾಗಿದೆ. ಬಾಹುಬಲಿ ಖ್ಯಾತಿಯ ಕಮಲಾ ಕಣ್ಣನ್ ಆರ್.ಸಿ. ವಿಎಫ್‌ಎಕ್ಸ್‌ನ ಉಸ್ತುವಾರಿ ವಹಿಸಿಕೊಂಡಿದ್ದು, ದೊಡ್ಡ ಪರದೆಯ ಮೇಲೆ ದೃಶ್ಯ ಚಮತ್ಕಾರ ನೀಡಲಿದೆ.

ಮಾರುತಿ ನಿರ್ದೇಶನದ “ದಿ ರಾಜಾಸಾಬ್” ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. “ದಿ ರಾಜಾಸಾಬ್” ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಪ್ರತಿ ರೋಜು ಪಂಡಗ’, ತೆಲುಗಿನ ಹಾರರ್ ಕಾಮಿಡಿ ‘ಪ್ರೇಮ ಕಥಾ ಚಿತ್ರಂ’ ಮತ್ತು ರೊಮ್ಯಾಂಟಿಕ್ ಕಾಮಿಡಿ ‘ಮಹಾನುಭಾವುಡು’ ಸೇರಿ ಹಲವು ಸೂಪರ್‌ಹಿಟ್‌ಗಳಿಗೆ ಸಿನಿಮಾ ನಿರ್ದೇಶನ ಮಾಡಿದ ಮಾರುತಿ, ಇದೀಗ “ದಿ ರಾಜಾಸಾಬ್” ಮೂಲಕ ರೊಮ್ಯಾಂಟಿಕ್ ಹಾರರ್ ಎಂಟರ್ಟೈನರ್ ಜತೆ ಆಗಮಿಸುತ್ತಿದ್ದಾರೆ.

‘ಕಾರ್ತಿಕೇಯ 2’ ಮತ್ತು ‘ಧಮಾಕಾ’ ಸೇರಿ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ಬಹುಕೋಟಿ ವೆಚ್ಚದಲ್ಲಿ “ದಿ ರಾಜಾಸಾಬ್” ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದರೆ, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂಗೀತವನ್ನು ಎಸ್‌ಎಸ್‌ ಥಮನ್ ಮಾಡಿದರೆ, ರಾಮ್ ಲಕ್ಷ್ಮಣ್ ಮತ್ತು ಕಿಂಗ್ ಸೊಲೊಮನ್ ಸವರ ಸಾಹಸ ಈ ಚಿತ್ರಕ್ಕಿರಲಿದೆ.

ಇದನ್ನೂ ಓದಿ : ‘ವಿಡಮುಯಾರ್ಚಿ’ಯಲ್ಲಿ ಅರ್ಜುನ್ ಸರ್ಜಾ ಲುಕ್ ರಿಲೀಸ್ – ಸ್ಟೈಲೀಶ್ ಅವತಾರದಲ್ಲಿ ಆಕ್ಷನ್ ಕಿಂಗ್..!

Leave a Comment

DG Ad

RELATED LATEST NEWS

Top Headlines

‘ಲಕ್ಷ್ಮೀಪುತ್ರ’ನಾದ ಸ್ಯಾಂಡಲ್​ವುಡ್ ಉಪಾಧ್ಯಕ್ಷ ಚಿಕ್ಕಣ್ಣ – ಸಾಥ್ ಕೊಟ್ಟ ಎ.ಪಿ ಅರ್ಜುನ್..!

ಕಿಸ್, ಅದ್ಧೂರಿ ಲವರ್ಸ್​ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ಎಪಿ ಅರ್ಜುನ್ ಫಿಲ್ಮಂಸ್​​ನ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಎಪಿ ಅರ್ಜುನ್ ಒಡೆತನದ ಎಪಿ

Live Cricket

Add Your Heading Text Here