ಬೆಂಗಳೂರು : ಜನವರಿ 3ರಂದು ಜೆಟ್ಲ್ಯಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿರೋ ಕೇಸಲ್ಲಿ ನಟ ದರ್ಶನ್ ಸೇರಿ 8 ಮಂದಿ ಸ್ಟಾರ್ಗಳಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಹಾಗೂ ಕಾಟೇರ ಚಿತ್ರತಂಡ ವಿಚಾರಣೆಗೆ ಇಂದು ಹೋಗಿತ್ತು. ಚಿತ್ರತಂಡ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಠಾಣೆಯಿಂದ ಹೊರಬಂದ ಬಳಿಕ ಅವರ ಪರ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರತಂಡದ ವಿರುದ್ಧ ಪೊಲೀಸರು ಯಾಕೆ ನೋಟೀಸ್ ಜಾರಿ ಮಾಡಿದರೋ ಅರ್ಥವಾಗದ ವಿಷಯವಾಗಿದೆ, ನಗರರದಲ್ಲಿ ಹೋಟೆಲ್ ಗಳಿಗೆ ಹೋಗಿ ಊಟ ಮಾಡುವುದು ತಪ್ಪೇ? ಮಧ್ಯರಾತ್ರಿ ಕಳೆದ ನಂತರ ಯಾರೂ ಊಟ ಮಾಡಲ್ಲವೇ? ರಾಜ್ಯದ ಮುಖ್ಯಮಂತ್ರಿ ಯಾವತ್ತೂ ಅಪರಾತ್ರಿಯಲ್ಲಿ ಊಟ ಮಾಡಿಲ್ಲವೇ?
ಚಿತ್ರತಂಡ ಪಾರ್ಟಿ ಮಾಡಲು ಅಲ್ಲಿಗೆ ಹೋಗಿರಲಿಲ್ಲ, ಪಬ್ ಮಾಲೀಕರೇ ಊಟಕ್ಕೆ ಆಹ್ವಾನಿಸಿದ್ದರು ಎಂದು ಕಾಟೇರ ಚಿತ್ರತಂಡದ ವಕೀಲರು ಹೇಳಿದ್ದಾರೆ.
ನೋಟೀಸ್ ನೀಡಿರುವದಕ್ಕೆ ಬೇರೆ ಕಾರಣಗಳಿವೆ ಮತ್ತು ಕಾಣದ ಕೈಗಳು ಇದನ್ನೆಲ್ಲ ಮಾಡಿವೆ ಎಂದು ಹೇಳಿದ್ದಾರೆ. ಪ್ರತಿಬಾರಿ ನಟ ದರ್ಶನ್ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಅವರ ಏಳ್ಗೆ ಸಹಿಸಲಾಗದ ಜನ ಇಂಥದನ್ನೆಲ್ಲ ಮಾಡಿಸುತ್ತಿದ್ದಾರೆ.
ಪೊಲೀಸರು ತಾಕತ್ತಿದ್ದರೆ ರಾತ್ರಿ ಮೂರು ಗಂಟೆಯವರೆಗೆ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಎಂಪೈರ್ ಹೋಟೆಲ್ ವಿರುದ್ಧ ಕೇಸ್ ಜರುಗಿಸಲಿ ಎಂದು ವಕೀಲರು ಸವಾಲೆಸೆದಿದ್ದಾರೆ.
ಇದನ್ನೂ ಓದಿ : ಅರವಿಂದ್ ಐಯ್ಯರ್-ಸಿರಿ ಜೋಡಿಯ ‘ಬಿಸಿಬಿಸಿ Ice-Cream’ ಚಿತ್ರದ ಟ್ರೇಲರ್ ರಿಲೀಸ್..!