Download Our App

Follow us

Home » ಅಪರಾಧ » ದರ್ಶನ್​​ ಫ್ಯಾನ್ಸ್ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ – ರಿಮ್ಯಾಂಡ್​ ಅರ್ಜಿಯಲ್ಲಿ ಉಲ್ಲೇಖ..!

ದರ್ಶನ್​​ ಫ್ಯಾನ್ಸ್ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ – ರಿಮ್ಯಾಂಡ್​ ಅರ್ಜಿಯಲ್ಲಿ ಉಲ್ಲೇಖ..!

ಬೆಂಗಳೂರು : ದರ್ಶನ್​​ ಗ್ಯಾಂಗ್​​​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧವಾಗಿ ಪೊಲೀಸರು ಕೋರ್ಟ್​ಗೆ 3ನೇ ಬಾರಿ ರಿಮ್ಯಾಂಡ್​ ಅರ್ಜಿ ಹಾಕಿದ್ದಾರೆ. ಕೊಲೆ ನಂತರ ದರ್ಶನ್​​​​ ಗ್ಯಾಂಗ್​​​ ವೆಬ್​ ಆ್ಯಪ್​ ಬಳಸಿದೆ, ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸುಳಿವು ಸಿಗದಂತೆ ಗ್ಯಾಂಗ್ ಆ್ಯಪ್​ ಬಳಕೆ ಮಾಡಿದೆ. ಆ್ಯಪ್​​ಗಳನ್ನು ಬಳಕೆ ಮಾಡಿ ನಂತರ ಆ್ಯಪ್​​​ ಡಿಲೀಟ್​ ಮಾಡಿದ್ದಾರೆ. ಅಷ್ಟೆ ಅಲ್ಲದೆ ಬೇರೆ-ಬೇರೆ ಸಿಮ್​​​ ಕಾರ್ಡ್​ಗಳನ್ನು ಬಳಸಿದ್ದಾರೆ. ಆರೋಪಿಗಳ ಮೊಬೈಲ್​​​ಗಳನ್ನು ರಿಟ್ರೀವ್​​ ಮಾಡಲು ಪೊಲೀಸರು ಅನುಮತಿ ಕೋರಿದ್ದಾರೆ.

3ನೇ ರಿಮ್ಯಾಂಡ್​ ಅರ್ಜಿಯಲ್ಲೂ ದರ್ಶನ್​​ ಫ್ಯಾನ್ಸ್​​ನ​ ಪುಂಡಾಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ತನಿಖೆಗೆ ದರ್ಶನ್​​ ಫ್ಯಾನ್ಸ್​ ಅಡ್ಡಿಪಡಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದು, ಅಭಿಮಾನಿ ಬಳಗವನ್ನು ಬಳಸಿಕೊಂಡು ತನಿಖೆಗೆ ನಿರಂತರ ಅಡ್ಡಿಪಡಿಸುತ್ತಿದ್ದಾರೆ. ದರ್ಶನ್​ ಅಭಿಮಾನಿ ಬಳಗವನ್ನು ಉಲ್ಲೇಖಿಸಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದು, A-1 ಪವಿತ್ರಾಗೌಡ ಮತ್ತು A-2 ದರ್ಶನ್​​​​​​ ಅಭಿಮಾನಿ ಬಳಗವನ್ನು ಬಳಸಿಕೊಳ್ತಿದ್ದಾರೆ. ಅಭಿಮಾನಿ ಬಳಗ ಬಳಸಿಕೊಂಡು ತನಿಖೆಗೆ ನಿರಂತರ ಅಡ್ಡಿ ಮಾಡುತ್ತಿದ್ದಾರೆ ಎಂದು ರಿಮ್ಯಾಂಡ್​ ಅರ್ಜಿ ಮೂಲಕ ಪೊಲೀಸರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಈ ರಿಮ್ಯಾಂಡ್​ ಅರ್ಜಿಯಲ್ಲಿ ಪವಿತ್ರಾಗೌಡ ಕಿಂಗ್​ಪಿನ್​​ ಆಗಿದ್ದು, ಈಕೆಯ ಪ್ರಚೋದನೆಯಿಂದಲೇ ರೇಣುಕಾ ಕೊಲೆಯಾಗಿದೆ. ಇತರೆ ಆರೋಪಿಗಳೊಂದಿಗೆ ಸೇರಿ ಒಳಸಂಚು ಮಾಡಿ ಕೊಲೆ ಮಾಡಲಾಗಿದೆ, A-2 ದರ್ಶನ್​​ ತನ್ನ ಹಣ ಹಾಗೂ ಅಭಿಮಾನಿ ಬಳಗವನ್ನು ಬಳಸಿಕೊಂಡಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿ ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾರೆ, ಈ ನೆಲದ ಕಾನೂನನ್ನು ದುರ್ಬಳಕೆ ಮಾಡಿಕೊಂಡಿರೋದು ಸಾಕ್ಷಾಧಾರದಲ್ಲಿ ಪತ್ತೆಯಾಗಿದೆ.

A-2 ದರ್ಶನ್​​ ತನ್ನ ಹಣಬಲ, ಪ್ರಭಾವಿ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯವೆಸಗಿದ್ದು, ಕಿಡ್ನಾಪ್​​, ಕೊಲೆ, ಸಾಕ್ಷಿ ನಾಶಕ್ಕೂ ಅಭಿಮಾನಿಗಳನ್ನು ಬಳಸಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ದರ್ಶನ್​​ ರೌಡಿ ಫ್ಯಾನ್ಸ್​ಗಳ ಬಂಡವಾಳ ಬಯಲಾಗಿದ್ದು, ಬಡತನದಲ್ಲಿರುವ ವ್ಯಕ್ತಿಗಳಿಗೆ ಹಣದ ಆಮಿಷ ತೋರಿಸಿ ಶವ ಸಾಗಿಸಿದ್ದಾರೆ. ದರ್ಶನ್​​ ಬಳಿಯಿದ್ದ ಹಣದ ದುರಹಂಕಾರದಿಂದಲೇ ಕೊಲೆಯಾಗಿದೆ, ರಿಮ್ಯಾಂಡ್​ ಅರ್ಜಿಯಲ್ಲಿ ದರ್ಶನ್​​​ ಹಣದ ದರ್ಪದ ಇಂಚಿಂಚೂ ಬಯಲಾಗಿದೆ.

ಇದನ್ನೂ ಓದಿ : ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಸಿನಿಮಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here