Download Our App

Follow us

Home » ಮೆಟ್ರೋ » ಪವಿತ್ರಾಗೌಡ ಲಿಪ್​ಸ್ಟಿಕ್​​​​​ ಅವತಾರದಿಂದ ಲೇಡಿ PSIಗೆ ಸಂಕಷ್ಟ – ಇದು ಬಿಟಿವಿ ವರದಿಯ ಬಿಗ್​ ಇಂಪ್ಯಾಕ್ಟ್..!

ಪವಿತ್ರಾಗೌಡ ಲಿಪ್​ಸ್ಟಿಕ್​​​​​ ಅವತಾರದಿಂದ ಲೇಡಿ PSIಗೆ ಸಂಕಷ್ಟ – ಇದು ಬಿಟಿವಿ ವರದಿಯ ಬಿಗ್​ ಇಂಪ್ಯಾಕ್ಟ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರ ಗೌಡ ಲಿಪ್​​​ಸ್ಪಿಕ್​ ಹಚ್ಕೊಂಡು ಮೂತಿ ಒನೆದಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆರ್​.ಆರ್​​.ನಗರ ಮನೆಯಲ್ಲಿ ಮಹಜರ್​​ಗೆ ಕರೆದೊಯ್ದಾಗ ಪವಿತ್ರ ಗೌಡ ಲಿಪ್​ಸ್ಟಿಕ್ ​ಹಚ್ಕೊಂಡಿದ್ದಳು. ಪವಿತ್ರಾಗೌಡ ಲಿಪ್​ಸ್ಟಿಕ್​​ನಿಂದ ಇದೀಗ ಲೇಡಿ PSIಗೆ ಲಿಪ್​ಸ್ಟಿಕ್​​​​​​​ ಸಂಕಷ್ಟ ಎದುರಾಗಿದೆ.

ಪವಿತ್ರಾಗೌಡ ಲಿಪ್​ಸ್ಟಿಕ್​​​​​ ಅವತಾರವನ್ನು ಮೊದಲು ಬಿಟಿವಿ ವರದಿ ಮಾಡಿತ್ತು. ಮಹಜರ್​​ಗೆ ಕರೆದೊಯ್ಯೊ ವೇಳೆ ಪವಿತ್ರ ಮೆಟ್ಟಿಲು ಇಳಿಯುತ್ತಾ ಲಿಪ್​ಸ್ಟಿಕ್​ ಹಚ್ಚಿದ್ದ ತುಟಿ, ಮೂತಿ ತಿರುಗಿಸಿದ್ದ ವಿಡಿಯೋ ನೋಡಿ ಪೊಲೀಸ್ ಕಸ್ಟಡಿಯಲ್ಲಿರುವ ಇವಳಿಗೆ ಲಿಪ್​​​ಸ್ಪಿಕ್ ಎಲ್ಲಿಂದ ಅನ್ನೊ ಪ್ರಶ್ನೆ ಹಲವರಲ್ಲಿ ಹುಟ್ಟಿಕೊಂಡಿತ್ತು.

ಪೊಲೀಸ್​ ವಶದಲ್ಲಿದ್ದ ಪವಿತ್ರಾಗೆ ಮೇಕಪ್​ ಐಟಂ ಸಿಕ್ಕಿದ್ದಾದ್ರೂ ಹೇಗೆ..? ಪವಿತ್ರಾ ಮೇಕಪ್​, ಲಿಪ್ ಸ್ಟಿಕ್ ಸುದ್ದಿಯನ್ನು BTV ಮೊದಲು ಬಿತ್ತರಿಸಿತ್ತು. BTV ವರದಿಯನ್ನು DCP ಗಿರೀಶ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಜರ್‌ಗೆ ಪವಿತ್ರಾಗೌಡಳನ್ನು ಆಕೆಯ ಮನೆಗೆ ಕರೆದೊಯ್ಯಲಾಗಿತ್ತು. ಆಗ ಪವಿತ್ರಾ ರೆಸ್ಟ್ ರೂಂಗೆ ಹೋಗುವುದಾಗಿ ಹೇಳಿ ಮಲಗೋ ರೂಂಗೆ ಹೋಗಿದ್ದಳು. ಮಲಗುವ ಕೋಣೆಯಲ್ಲಿ ಹೋಗಿದ್ದಾಗ ಮುಖ ತೊಳೆದು ಲಿಪ್‌ಸ್ಟಿಕ್ ಹಾಕಿರಬಹುದು ಅನ್ನೊ ಅನುಮಾನ ಹುಟ್ಟಿಕೊಂಡಿತು. ಹಾಗಾಗಿ ಅಧಿಕಾರಿಗಳು ಯಾವ ಸಂದರ್ಭದಲ್ಲಿ ಲಿಪ್‌ಸ್ಟಿಕ್‌ ಹಾಕಿದ್ರು ಎಂದು ವಿವರಣೆ ಕೇಳಿದ್ದಾರೆ.

ಈ ಸಂಬಂಧ PSIಗೆ ತನಿಖಾಧಿಕಾರಿ ನೋಟಿಸ್ ನೀಡಿದ್ದರು. ನೋಟಿಸ್​ಗೆ PSI ಉತ್ತರ ಕೊಟ್ಟಿದ್ದು, ವಾಶ್ ರೂಂಗೆ ಹೋಗ್ಬೇಕು ಅಂತ ಪವಿತ್ರಾ ರಿಕ್ವೆಸ್ಟ್ ಮಾಡಿದ್ದಳು. ಆಯ್ತು ಆಂತ ವಾಶ್ ರೂಂಗೆ ಬಿಟ್ಟಾಗ ಅಲ್ಲೇ ಮೇಕಪ್ ಮಾಡ್ಕೊಂಡಿದ್ದಾಳೆ ಎಂದಿದ್ದಾರೆ. ನೋಟಿಸ್​ಗೆ ಕೊಟ್ಟಿರುವ ಉತ್ತರದಲ್ಲಿ ಪವಿತ್ರಾ ನೌಟಂಕಿ ಆಟ ಕೊನೆಗೂ ಬಯಲಾಗಿದೆ.

ಇದನ್ನೂ ಓದಿ : ಬೆಂಗಳೂರು : ಜಸ್ಟ್ 30 ಸೆಕೆಂಡ್ಸ್, ಸಿನಿಮಾ ಸ್ಟೈಲ್​ನಲ್ಲಿ ಗನ್​ ತೋರಿಸಿ 70 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here