Download Our App

Follow us

Home » ಅಪರಾಧ » ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಆ. 31ಕ್ಕೆ ಮುಂದೂಡಿಕೆ..!

ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಆ. 31ಕ್ಕೆ ಮುಂದೂಡಿಕೆ..!

ಬೆಂಗಳೂರು : ನಟಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೇಸ್​​ನಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನ ಆಗಸ್ಟ್ 31ಕ್ಕೆ ಕಾಯ್ದಿರಿಸಿ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಹಲವು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ ‘ಸಿಂಗಲ್ ಪೇರೆಂಟ್’ ಬೇಸ್ ಮೇಲೆ  ಪೊಲೀಸರು ಚಾರ್ಜ್ ಶೀಟ್ ಸಲ್ಲಿಸೋ ಮುನ್ನವೇ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ತನ್ನ ಮಗಳ ಭವಿಷ್ಯ ಹಾಗೂ ಆರೈಕೆ ದೃಷ್ಟಿಯಿಂದ ಬೇಲ್​ಗೆ ಅರ್ಜಿ ಸಲ್ಲಿಸಿ, ಪ್ರಕರಣದ ನಂತರ ತನ್ನ ಮಗಳು ಮಾನಸಿಕವಾಗಿ ಕುಗ್ಗಿದ್ದಾಳೆ‌, ಮಗಳ ಆರೈಕೆ ಹಾಗು ಭವಿಷ್ಯ ರೂಪಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮಗಳಿಗೆ ನಾನೊಬ್ಬಳೇ ಪೋಷಕಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ಬಳಿಕ ಆಗಸ್ಟ್ 31ಕ್ಕೆ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ. ಇನ್ನು ಪವಿತ್ರಾಗೌಡ ಸೇರಿ ನಾಲ್ವರು ಆರೋಪಿಗಳ ಜಾಮೀನು ಕೂಡ ಮುಂದೂಡಿಕೆಯಾಗಿದೆ.

ಇದನ್ನೂ ಓದಿ : ಜೈಲಿನಲ್ಲಿ ರಾಜಾತಿಥ್ಯ ​​- ಜೈಲುಗಳ ಸುಧಾರಣೆಗಾಗಿ ಚೀಫ್​ ಜಸ್ಟೀಸ್​ಗೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಪತ್ರ..!

Leave a Comment

DG Ad

RELATED LATEST NEWS

Top Headlines

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ K.L ರಾಹುಲ್-ಅಥಿಯಾ ದಂಪತಿ..!

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಖುದ್ದು ಆಥಿಯಾ ಶೆಟ್ಟಿ ತಮ್ಮ ಇನ್​​ಇಸ್ಟಾಗ್ರಾಮ್​ನಲ್ಲಿ

Live Cricket

Add Your Heading Text Here