Download Our App

Follow us

Home » ರಾಷ್ಟ್ರೀಯ » ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭ – ನಾಳೆ ಮಧ್ಯಂತರ ಬಜೆಟ್‌ ಮಂಡನೆ..!

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭ – ನಾಳೆ ಮಧ್ಯಂತರ ಬಜೆಟ್‌ ಮಂಡನೆ..!

ನವದೆಹಲಿ : ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭವಾದ ಮಾರನೇ ದಿನ, ಅಂದರೆ ನಾಳೆ (ಫೆ. 1) ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿದ್ದು, ಸಭೆಯಲ್ಲಿ, ‘ವಿಪಕ್ಷಗಳು ಪ್ರಸ್ತಾಪಿಸುವ ವಿವಿಧ ವಿಷಯಗಳ ಬಗ್ಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಆದರೆ ವಿಪಕ್ಷಗಳು ಸದನ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದೆ.

ಇಂದು ಈ ಕುರಿತು ಪ್ರಧಾನಿ ಮೋದಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ವರ್ಷದ ಗಣರಾಜ್ಯೋತ್ಸವದಲ್ಲಿ ನಾವೆಲ್ಲರೂ “ನಾರಿ ಶಕ್ತಿ”ಗೆ ಸಾಕ್ಷಿಯಾಗಿದ್ದೇವೆ. ಇಂದು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಾಳೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್​​​ ಮಂಡಿಸಲಿದ್ದಾರೆ. ಇದು ನಾರಿ ಶಕ್ತಿಯ ಹಬ್ಬ ಎಂದು ಹೇಳಿದ್ದಾರೆ.

 

ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಈ ಸಲದ ಬಜೆಟ್ ಕೇವಲ ವೋಟ್ ಆನ್ ಅಕೌಂಟ್ ಆಗಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಹೊಸ ಸರ್ಕಾರ ರಚನೆ ಮಾಡಿ, ಜೂನ್ ನಲ್ಲಿ ಹೊಸ ಹಣಕಾಸು ವರ್ಷ (2024-25)ಕ್ಕೆ ಬೇಕಾದ ಪೂರ್ಣ ಬಜೆಟ್ ಮಂಡಿಸಲಿದೆ. ವೋಟ್ ಆನ್ ಅಕೌಂಟ್‌ನಲ್ಲಿ ಅಥವಾ ಮಧ್ಯಂತರ ಬಜೆಟ್‌ನಲ್ಲಿ ಜೂನ್ ಕೊನೆ ತನಕ ಸರ್ಕಾರದ ಖರ್ಚುವೆಚ್ಚ ನಿಭಾಯಿಸುವುದಕ್ಕೆ ಬೇಕಾದ ಹಣಕಾಸಿನ ಅನುಕೂಲಗಳನ್ನು ಮಾಡಿಕೊಡಲಾಗುತ್ತದೆ.

ಅಮಾನತಾಗಿದ್ದ 146 ಸಂಸದರು ಸದನಕ್ಕೆ
ಚಳಿಗಾಲದ ಸಂಸತ್‌ ಅಧಿವೇಶನದ ಸಮಯದಲ್ಲಿ ಸನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಅಶಿಸ್ತು ತೋರಿದ ಕಾರಣ ಅಮಾನತುಗೊಂಡಿದ್ದ 146 ವಿಪಕ್ಷ ಸಂಸದರು ಬುಧವಾರ ಸದನಕ್ಕೆ ಆಗಮಿಸಲಿದ್ದಾರೆ. 132 ಸಂಸದರು ಚಳಿಗಾಲದ ಅಧಿವೇಶನಕ್ಕೆ ಸೀಮಿತವಾಗಿ ಅಮಾನತಾಗಿದ್ದರು. ಇನ್ನು 14 ಸಂಸದರನ್ನು ಗಂಭೀರ ಅಶಿಸ್ತು ತೋರಿದ್ದ ಕಾರಣ ನೀಡಿ ಅನಿರ್ಧಿಷ್ಟಾವಧಿಗೆ ಸಸ್ಪೆಂಡ್‌ ಮಾಡಲಾಗಿತ್ತು. ಇವರ ಅಮಾನತು ರದ್ದುಪಡಿಸಲಾಗಿದೆ.

ಕೇಂದ್ರ ಬಜೆಟ್ 2024 ಮಂಡನೆ ನೇರ ಪ್ರಸಾರ ವೀಕ್ಷಣೆ, ದಿನಾಂಕ, ಸಮಯ – ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ 2024 ರ ಬಜೆಟ್ ಮಂಡಿಸಲಿದ್ದಾರೆ.  ಫೆ 1 ರಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಡಿಡಿ ನ್ಯೂಸ್‌ನಲ್ಲಿ ನೋಡಬಹುದು. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಆನ್‌ಲೈನಲ್ಲಿ ಬಜೆಟ್ ಮಂಡನೆಯನ್ನು ಪ್ರಸಾರ ಮಾಡಲಿದೆ.

ದನ್ನೂ ಓದಿ : ರಾಜ್ಯದಲ್ಲಿ ಆನ್​ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳಿಗೆ ತಾತ್ಕಾಲಿಕ ನಿರ್ಬಂಧ – ಕಾರಣವೇನು?

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here