ಬೀದರ್ : ಗ್ರಾಮ ಪಂಚಾಯತ್ನ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಪಿಡಿಒ ರಾಹುಲ್, ಜೆಇ ಸಿದ್ರಾಮೇಶ್ವರ್ ಲೋಕಾ ಬಲೆಗೆ ಬಿದ್ದ ಪಂಚಾಯತ್ ಅಧಿಕಾರಿಗಳು.
24 ಲಕ್ಷ ರೂ. ಬಿಲ್ ಪಾವತಿ ಬಳಿಕ ಒಂದು ಲಕ್ಷ ರೂ. ಲಂಚ ಪಡೆಯುವ ವೇಳೆ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ. ಈ ಇಬ್ಬರು ಅಧಿಕಾರಿಗಳು 24 ಲಕ್ಷ ರೂ. ಬಿಲ್‌ಗೆ 2.55 ಲಕ್ಷ ಬೇಡಿಕೆಯಿಟ್ಟಿದ್ದರು. ಈ ಪೈಕಿ ಒಂದು ಲಕ್ಷ ರೂ. ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಗುತ್ತಿಗೆದಾರ ಅರವಿಂದ ಭಾಲ್ಕೆ ಎಂಬವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನೌಬಾದ್‌ನ ಆಟೋ ನಗರ, ಹಲ್ಬರ್ಗಾ ಬಸ್ ಸ್ಟ್ಯಾಂಡ್ ಬಳಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಡಿಎಸ್ಪಿ ಹನುಮಂತರಾಯ್ ಹಾಗೂ ಇನ್ಸ್ಪೆಕ್ಟರ್ ಬಾಬಾಸಾಹೇಬ್ ಪಾಟೀಲ್ ನೇತೃತ್ವದಲ್ಲಿ ಎರಡು ತಂಡಗಳಾಗಿ ಪ್ರತ್ಯೇಕ ದಾಳಿ ನಡೆಸಿ ಇಬ್ಬರು ಅಧಿಕಾರಿಗಳಿಂದ ಒಂದು ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಹೆಚ್ಚಾದ ಮಂಕಿಪಾಕ್ಸ್ ಆತಂಕ – ಎಲ್ಲಾ ರಾಜ್ಯಗಳ ಆಸ್ಪತ್ರೆಗಳಲ್ಲಿ ಐಸೋಲೇಷನ್ ಸೌಲಭ್ಯ ಸಿದ್ಧತೆಗೆ ಕೇಂದ್ರ ಸೂಚನೆ..!