Download Our App

Follow us

Home » ಸಿನಿಮಾ » ಒಟಿಟಿ ಅಬ್ಬರದಿಂದ ಚಿತ್ರಮಂದಿರಗಳಿಗೆ ಕಂಟಕ : 94 ಸಿನಿಮಾ ರಿಲೀಸ್ ಆದ್ರೂ ಒಂದೂ ಹಿಟ್ ಲಿಸ್ಟ್​ನಲ್ಲಿಲ್ಲ..!

ಒಟಿಟಿ ಅಬ್ಬರದಿಂದ ಚಿತ್ರಮಂದಿರಗಳಿಗೆ ಕಂಟಕ : 94 ಸಿನಿಮಾ ರಿಲೀಸ್ ಆದ್ರೂ ಒಂದೂ ಹಿಟ್ ಲಿಸ್ಟ್​ನಲ್ಲಿಲ್ಲ..!

ಒಟಿಟಿ ಅನ್ನೋದು ಚಿತ್ರರಂಗಕ್ಕೆ ಕಂಟಕವಾಗಿ ಪರಿಣಮಿಸಿದೆ. ಇತ್ತೀಚಿಗೆ ಜನ ಥಿಯೇಟರ್​ಗೆ ಬರೋದನ್ನು ನಿಲ್ಲಿಸಿ ಒಟಿಟಿ ಮೊರೆ ಹೋಗುತ್ತಿದ್ದಾರೆ. ಅಂಗೈ ಅಂಗಳದಲ್ಲೇ ಸಿನಿಮಾ ನೋಡುವ ಅವಕಾಶವಿರೋದರಿಂದ ಜನ ಥಿಯೇಟರ್​​ಗೆ ಹೋಗಿ ಸಿನಿಮಾ ನೋಡೊದನ್ನು ಕಡಿಮೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಪ್ಯಾನ್ ಇಂಡಿಯಾ ಎಂಬ ಹೊಸ ಟ್ರೆಂಡ್ ಕೂಡ ಜನರನ್ನ ಥಿಯೇಟರ್ ನಿಂದ ದೂರ ಉಳಿಯುವಂತೆ ಮಾಡಿದೆ.

ಮೊದಲೆಲ್ಲಾ ಸ್ಟಾರ್ ನಟರು ವರ್ಷಕ್ಕೆ ಒಂದಾದ್ರೂ ಸಿನಿಮಾ ಮಾಡ್ತಿದ್ರು. ಆದ್ರೆ ಈಗ  2 ವರುಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಕೇವಲ ಕನ್ನಡ ಸಿನಿಮಾ ರಂಗ ಮಾತ್ರವಲ್ಲ. ಅತಿಹೆಚ್ಚು ಸಿನಿಮಾ ಅಭಿಮಾನಿಗಳಿರುವ ತೆಲುಗು ನೆಲದಲ್ಲಿ ಸಹ ಸಿನಿಮಾ ಮಂದಿರಗಳು ಖಾಲಿ ಹೊಡಿತಿದ್ದಾವೆ.

ಹೌದು, ತೆಲುಗು ನೆಲದಲ್ಲಿ ಸಿನಿಮಾ ಮಂದಿರಗಳು ಪ್ರೇಕ್ಷಕರ ಕೊರತೆಯನ್ನ ಎದುರಿಸ್ತಿವೆ. ಇದರ ಪರಿಣಾಮ ತೆಲಂಗಾಣದ ಸುಮಾರು 400 ಚಿತ್ರಮಂದಿರಗಳು ಮೇ 17ರವರೆಗೆ 10 ದಿನಗಳ ಕಾಲ ಬಂದ್ ಆಗ್ತಿವೆ. ಅಲ್ಲಿನ ಪ್ರದರ್ಶಕರ ಸಂಘ ಈ ನಿರ್ಧಾರ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಆಗುವ ಬದಲಾವಣೆ ನೋಡಿಕೊಂಡು ಥಿಯೇಟರ್ ಗಳನ್ನ ರಿ ಓಪನ್ ಮಾಡುವ ನಿರ್ಧಾರಕ್ಕೆ ಬರ್ತಿವಿ ಅಂತ ಹೇಳಿದ್ದಾರೆ.

ತೆಲಂಗಾಣದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಅಲ್ಲಿ ಸಹ ದೊಡ್ಡ ಸಿನಿಮಾಗಳು ತೆರೆಗೆ ಬರ್ತಾ ಇಲ್ಲ. ಸಿದ್ದು ಜೋನಾಲ್ ಗುಡ್ಡ ನಟನೆಯ ಟಿಲ್ಲು ಸ್ಕ್ವೇರ್ ಆದ ಮೇಲೆ ಯಾವ ಸಿನಿಮಾನೂ ಕ್ಲಿಕ್ ಆಗ್ತಿಲ್ಲ. ಟಿಲ್ಲು ಸ್ಕ್ವೇರ್ ಆದಮೇಲೆ ವಿಜಯ್ ದೇವರಕೊಂಡ ಮೃಣಾಲ್ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ಬಂತು. ಆದ್ರೆ ಆ ಸಿನಿಮಾ ಮೊದಲ ದಿನವೇ ನೆಗೆಟಿವ್ ಟಾಕ್ ಪಡೆದುಕೊಳ್ತು. ಹಾಗಾಗಿ ಮೊದಲ ದಿನದಿಂದಲೇ ಥಿಯೇಟರ್ ಗಳು ಖಾಲಿ ಹೊಡಿತಿದೆ.

ಇದನ್ನೂ ಓದಿ : SSLC ಗ್ರೇಸ್​ ಮಾರ್ಕ್ಸ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ..!

Leave a Comment

DG Ad

RELATED LATEST NEWS

Top Headlines

ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನ – ಸಿನಿ ಪ್ರಿಯರಿಗಾಗಿ ಬರ್ತಿದೆ ಹೊಸ ಒಟಿಟಿ ಪ್ಲಾಟ್‌ಫಾರ್ಮ್‌..!

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗನುಗುಣವಾಗಿ, ಅವರನ್ನು ರಂಜಿಸಲು ಓಟಿಟಿ ಪ್ಲಾಟ್

Live Cricket

Add Your Heading Text Here