Download Our App

Follow us

Home » ಸಿನಿಮಾ » ಭಾರ್ಗವ್ ಕೃಷ್ಣ ಅಭಿನಯದ “ಓಂ ಶಿವಂ” ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​ – ಸಿನಿಮಾ ಆಗಸ್ಟ್​​​​​ನಲ್ಲಿ ತೆರೆಗೆ..!

ಭಾರ್ಗವ್ ಕೃಷ್ಣ ಅಭಿನಯದ “ಓಂ ಶಿವಂ” ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​ – ಸಿನಿಮಾ ಆಗಸ್ಟ್​​​​​ನಲ್ಲಿ ತೆರೆಗೆ..!

ಸ್ಯಾಂಡಲ್​​ವುಡ್​​​ಗೆ ಹೊಸ ನಾಯಕನಟರು ಎಂಟ್ರಿ ಕೊಡ್ತಿದ್ದಾರೆ. ಇದೀಗ ಈ ಸಾಲಿಗೆ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಹೊಸ ಹೀರೊ ಭಾರ್ಗವ್ ಕೃಷ್ಣ ಕೂಡ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಭಾರ್ಗವ್ ಕೃಷ್ಣ ಅಭಿನಯದ ಚೊಚ್ಚಲ ಚಿತ್ರ “ಓಂ ಶಿವಂ” ನ ಲಿರಿಕಲ್ ಸಾಂಗ್ ಇತ್ತೀಚಿಗೆ ಬಿಡುಗಡೆಯಾಯಿತು.

‘ಓಂ ಶಿವಂ’ ಚಿತ್ರವನ್ನು ಆಲ್ವಿನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ದೀಪ ಮೂವಿಸ್ ಪ್ರೊಡಕ್ಷನ್ನ ಕೃಷ್ಣ ಕೆ.ಎನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಹಾಡನ್ನು ಭಾರ್ಗವ್ ಕೃಷ್ಣ ಅವರ ಅಜ್ಜಿ, ತಾತಾ ಬಿಡುಗಡೆ ಮಾಡಿ, ಮೊಮ್ಮಗನ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾಹಿತಿ ಹಂಚಿಕೊಂಡರು.

ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿರ್ಮಾಪಕ ಕೃಷ್ಣ , ಆಲ್ವಿನ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ಬಂದು ಕಥೆ ಹೇಳಿದರು. ನಾನು ಕಥೆ ಚೆನ್ನಾಗಿದೆ. ನಾಯಕನನ್ನು ಹುಡುಕಿ. ಚಿತ್ರ ಆರಂಭಿಸೋಣ ಎಂದೆ. ಅದಕ್ಕೆ ಆಲ್ವಿನ್ ಅವರು ನಿಮ್ಮ ಮಗ ಭಾರ್ಗವ್, ನನ್ನ ಕಥೆಗೆ ಸರಿ ಹೊಂದುತ್ತಾರೆ. ಅವರೆ ನಮ್ಮ ಚಿತ್ರದ ನಾಯಕ ಎಂದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

“ರಾಜ್ ಬಹದ್ದೂರ್” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು ಎಂದು ಮಾತನಾಡಿದ ನಿರ್ದೇಶಕ ಆಲ್ವಿನ್, “ಓಂ ಶಿವಂ” ಲವ್ ಜಾನರ್ ನ ಚಿತ್ರ. ಆದರೆ ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಮ್ಮ ಚಿತ್ರಕ್ಕೆ ಇಪ್ಪತ್ತೊಂದು ವಯಸ್ಸಿನ ನಾಯಕ ಬೇಕಾಗಿತ್ತು. ಭಾರ್ಗವ್ ಅವರಿಗೂ ಅಷ್ಟೇ ವಯಸ್ಸು. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮೊದಲ ಪ್ರಯತ್ನದಲ್ಲೇ ಭಾರ್ಗವ್ ಚೆನ್ನಾಗಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳು, ಅದ್ದೂರಿ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ತಮ್ಮ ಮೊದಲ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಾಯಕ ಭಾರ್ಗವ್ ಕೃಷ್ಣ, ಮೊದಲು ನಾನು ನನ್ನ ತಂದೆಗೆ ಧನ್ಯವಾದ ತಿಳಿಸುತ್ತೇನೆ. ಆಲ್ವಿನ್ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಮೊದಲ ಚಿತ್ರವಾಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿರುವುದಾಗಿ ನಾಯಕ ಭಾರ್ಗವ್ ಕೃಷ್ಣ ತಿಳಿಸಿದರು.

ಇನ್ನು ನಾಯಕಿ ವಿರಾಣಿಕ ಶೆಟ್ಟಿ ಅಂಜಲಿ ನನ್ನ ಪಾತ್ರದ ಹೆಸರು ಎಂದು ಹೇಳಿದರು. ನಟರಾದ ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ವರ್ಧನ್, ನಟಿಯರಾದ ಅಪೂರ್ವ, ಲಕ್ಷ್ಮೀ ತಮ್ಮ ಪಾತ್ರದ ಬಗ್ಗೆ ತಿಳಿಸಿದರು. ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲೆ, ಛಾಯಾಗ್ರಾಹಕ ವೀರೇಶ್ ಹಾಗೂ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ : ತಮಿಳುನಾಡು ಸರ್ಕಾರಿ ಬಸ್​​​​​​​ಗೆ ಕಲ್ಲು ಹೊಡೆದ ಯುವಕ..!

Leave a Comment

DG Ad

RELATED LATEST NEWS

Top Headlines

ರೇಣುಕಾಸ್ವಾಮಿ ಕರೆತಂದಿದ್ದ ಆಟೋಗೆ ರಿಲೀಸ್ ಭಾಗ್ಯ – ಆರೋಪಿ ಜಗದೀಶ್​​ಗೆ ಸೇರಿದ್ದ ವಾಹನ ಬಂಧಮುಕ್ತ!

ಚಿತ್ರದುರ್ಗ : ನಟ ದರ್ಶನ್​ ಮತ್ತು ಗ್ಯಾಂಗ್​ನಿಂದ​ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ಮೊದಲ ವಾಹನ ರಿಲೀಸ್​ಗೆ ಕೋರ್ಟ್​ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ

Live Cricket

Add Your Heading Text Here