ಬೆಂಗಳೂರು : ಇನ್ಸ್ಪೆಕ್ಟರ್ ರ್ಯಾಂಕ್ ಅಧಿಕಾರಿಗಳಿಗೆ ಸರ್ಕಾರ 2 ವರ್ಷಕ್ಕೆ ಟ್ರಾನ್ಸ್ಫರ್ ನೋಟಿಫೀಕೆಷನ್ ನೀಡಿತ್ತು. ಸರ್ಕಾರ ನೋಟಿಫಿಕೇಷನ್ ಮಾಡಿದ ನಂತ್ರ ಸರ್ಕಾರಿ ಆದೇಶ( G.O) ಆಗಿಲ್ಲ, ಹಾಗಾಗಿ ವರ್ಗಾವಣೆ ಸಂಬಂಧ ಪೊಲೀಸ್ ಅಧಿಕಾರಿಗಳು KAT ಮೊರೆ ಹೋಗಿದ್ದಾರೆ. ಇದೀಗ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಗೊಂದಲದ ಗೂಡಾಗಿದೆ.
2 ವರ್ಷದ ವರ್ಗಾವಣೆಗೆ ಸಂಬಂಧಿಸಿದ ಬಗ್ಗೆ ಸ್ಪಷ್ಟನೆ ನೀಡುವಂತೆ ಪೊಲೀಸ್ ಇನ್ಸ್ಪೆಕ್ಟರ್ಗಳು KAT ಮೊರೆ ಹೋಗಿದ್ದಾರೆ. KAT ಕೋರ್ಟ್ ನಿನ್ನೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದು, ಅರ್ಜಿದಾರರ ಪರ ಸುಮಾರು 10-15ರಿಂದ ವಕೀಲರು ಹಾಜರ್ ಆಗಿದ್ದರು. AG ಶಶಿಕಿರಣ್ ಶೆಟ್ಟಿ ನೋಟಿಫಿಕೇಷನ್ ಬಗ್ಗೆ ವಿವರಣೆ ನೀಡಿದ್ದಾರೆ.
ಸರ್ಕಾರ ಒಳ್ಳೆ ಉದ್ದೇಶದಿಂದ ನೋಟಿಫಿಕೇಷನ್ ಮಾಡಿದೆ, ವರ್ಗಾವಣೆ ಆದೇಶ ನೋಟಿಫಿಕೇಷನ್ ಆದ ದಿನದಿಂದ ಅನ್ವಯವಾಗುತ್ತದೆ. ಸರ್ಕಾರ ಇದನ್ನು ಸ್ಪಷ್ಟಪಡಿಸಿದೆ ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ. AG ಕೇರಳ ಹಾಗೂ ಬೇರೆ ರಾಜ್ಯದ ಹೈಕೋರ್ಟ್ ಆದೇಶದ ಪ್ರತಿ ನೀಡಿದ್ದು, ವಾದ-ಪ್ರತಿವಾದ ಆಲಿಸಿ KAT ಜುಲೈ 31ಕ್ಕೆ ಅರ್ಜಿ ಮುಂದೂಡಿದೆ.
ಇದನ್ನೂ ಓದಿ : ಮೇರು ಸಂಗೀತಗಾರ ಆಚಾರ್ಯ ಪಂಡಿತ್ ಬೀಮಲೇಂದು ಮುಖರ್ಜಿ ಅವರ ಶತಮಾನೋತ್ಸವದ ಅಂಗವಾಗಿ ಶಾಸ್ತ್ರೀಯ ಸಂಗೀತ ಸಂಜೆ..!