Download Our App

Follow us

Home » ರಾಜಕೀಯ » ನಾಳೆಯಿಂದ ಉತ್ತರದತ್ತ ಅತಿರಥರ ದಂಡಯಾತ್ರೆ – ಕೇಸರಿ ಭದ್ರ ಕೋಟೆ ಭೇದಿಸಲು ಕಾಂಗ್ರೆಸ್ ರಣತಂತ್ರ..!

ನಾಳೆಯಿಂದ ಉತ್ತರದತ್ತ ಅತಿರಥರ ದಂಡಯಾತ್ರೆ – ಕೇಸರಿ ಭದ್ರ ಕೋಟೆ ಭೇದಿಸಲು ಕಾಂಗ್ರೆಸ್ ರಣತಂತ್ರ..!

ಬೆಂಗಳೂರು : 18ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇದೇ ಶುಕ್ರವಾರ ನಡೆಯಲಿದೆ. ಇದಾದ ಬಳಿಕ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಕೇವಲ ಒಂದೆರಡು ದಿನಗಳು ಬಾಕಿ ಇರುವುದರಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನಲೆ ನಾಳೆಯಿಂದ ಉತ್ತರದತ್ತ ಅತಿರಥರು ದಂಡಯಾತ್ರೆ ಆರಂಭಿಸಲಿದ್ದಾರೆ.

ಉತ್ತರ ಕರ್ನಾಟಕದಲ್ಲೂ ಹೆಚ್ಚು‌ ಹಿಡಿತ ಸಾಧಿಸಿರುವ ನಿಟ್ಟಿನಲ್ಲಿ ಇಂದಿನಿಂದ ಮೇ‌ 3ರವರೆಗೆ ಉತ್ತರ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕೈಗೊಳ್ಳಲಿದ್ದಾರೆ. 12 ದಿನಗಳ ಕಾಲ ನಿರಂತರ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಸಿದ್ದತೆ ನಡೆಸುತ್ತಿದ್ದು, ಕೇಸರಿ ಭದ್ರ ಕೋಟೆಯಾಗಿರುವ ಉತ್ತರ ಕರ್ನಾಟಕವನ್ನು ಭೇದಿಸಲು ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಉತ್ತರದ ಜಿಲ್ಲೆಗಳಿಗೆ ಲಗ್ಗೆ ಇಡಲಿದ್ದಾರೆ.

ಇನ್ನು ಏಪ್ರಿಲ್​​ 28, 29ರಂದು ರಾಜ್ಯಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡಲಿದ್ದು, ಏಪ್ರಿಲ್ 28ರಂದು ದಾವಣಗೆರೆ, ಕಾರವಾರ ಬೆಳಗಾವಿಯಲ್ಲಿ ಪ್ರಚಾರ ನಡೆಸಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 29ರಂದು ವಿಜಯಪುರ, ಕೊಪ್ಪಳ, ಕಲಬುರಗಿಯಲ್ಲಿ ಪ್ರಚಾರ ನಡೆಸಲಿದ್ದು, ಬಿಜೆಪಿ-ಜೆಡಿಎಸ್​ ಮೈತ್ರಿ ನಾಯಕರಿಂದಲೂ ಉತ್ತರದಲ್ಲಿ ಮತಬೇಟೆ ನಡೆಯಲಿದೆ. ಮಾಜಿ ಸಿಎಂಗಳಾದ ಬಿಎಸ್​ವೈ, ಹೆಚ್​ಡಿಕೆ, ಬೊಮ್ಮಾಯಿ, ಡಿವಿಎಸ್​,ವಿಜಯೇಂದ್ರ, ನಿಖಿಲ್​​ ಕುಮಾರಸ್ವಾಮಿಯಿಂದಲೂ ಎರಡನೇ ಹಂತದ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ : ನ್ಯಾಯಾಲಯದ ಆದೇಶ ಪಾಲಿಸಲು ನಿರ್ಲಕ್ಷ್ಯ – ರಾಜ್ಯ ಸರ್ಕಾರ ಮತ್ತು ಎಲ್ಲಾ ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌..! 

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here