ಮೈಸೂರು : ಎರಡು ವರ್ಷಗಳ ನಂತರ ಭರ್ತಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಭಿಜಿತ್ ಲಗ್ನದಲ್ಲಿ ಬಾಗಿನ ಅರ್ಪಿಸಿದ್ದಾರೆ.
ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಮೋದಿ ಸರ್ಕಾರ ಬಂದ್ಮೇಲೆ 121 ED ಕೇಸ್ ಆಗಿವೆ. ವಿರೋಧ ಪಕ್ಷಗಳ ಮೇಲೆ 115 ಪ್ರಕರಣ ಹಾಕಿದ್ದಾರೆ. ವಿಪಕ್ಷದವರನ್ನ ವಿನಾಕಾರಣ ಜೈಲಿಗೆ ಕಳಿಸುತ್ತಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಇಂಥಾ ಷಡ್ಯಂತ್ರ ನಡೆಯಲ್ಲ. ನಾವು ಯಾವುದೇ ಅಪರಾಧ ಮಾಡಿಲ್ಲ, ಹೆದರೋ ಮಾತಿಲ್ಲ ಎಂದಿದ್ದಾರೆ.
ನಮ್ಮ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯಲ್ಲ. JDS-ಬಿಜೆಪಿ ನಾಯಕರು ಮನೆಮುರುಕರು. ಅವರು ಮನೆ ಮುರುಕ ಕೆಲಸ ಮಾಡುತ್ತಿದ್ದಾರೆ. ED ತನಿಖೆ ಮಾಡಿದ್ರೆ ತಪ್ಪು ಅಂತಾ ನಾನು ಹೇಳಲ್ಲ. ನ್ಯಾಯಯುತವಾಗಿ ತನಿಖೆ ಮಾಡಲಿ. ಆದರೆ ವಿಪಕ್ಷಗಳನ್ನು ಬೆದರಿಸೋ ಕೆಲಸ ಆಗ್ತಿದೆ ಎಂದು KRS ಬಳಿ ಸಿಎಂ ಸಿದ್ದರಾಮಯ್ಯ ರೋಷಾವೇಷದ ಭಾಷಣ ಮಾಡಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದ ನಿರ್ಮಲಾ ಸೀತಾರಾಮನ್ ವಿರುದ್ದ ಗುಡುಗಿದ ಸಿಎಂ ಸಿದ್ದರಾಮಯ್ಯ ಅವರು, ನಿರ್ಮಲಾ ಸೀತಾರಾಮನ್ ದೊಡ್ಡ ಸುಳ್ಳು ಹೇಳಿದ್ದಾರೆ. ರಾಜ್ಯಕ್ಕೆ ಅನ್ಯಾಯ ಮಾಡಿದವರೇ ನಿರ್ಮಲಾ ಸೀತಾರಾಮನ್ ಎಂದಿದ್ದಾರೆ.
ನಮ್ಮಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಹೆದರುತ್ತಿಲ್ಲಾ. ಕೇಂದ್ರ ಸರ್ಕಾರದ ನೀತಿಯಿಂದ FDI ಹೂಡಿಕೆ ಆಗ್ತಿಲ್ಲಾ. FDIನಲ್ಲಿ ಶೇ.30ರಷ್ಟು ಇಳಿಕೆ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದಿದ್ದಾರೆ.
ಇನ್ನು ನಮ್ಮ ಮೇಲೆ ಸಾಲ ಮಾಡಿದ ಆರೋಪ ಹೊರಿಸಿದ್ದಾರೆ. ನಾವು ಆರ್ಥಿಕ ಶಿಸ್ತನ್ನು ಮೀರುವ ಕೆಲಸ ಮಾಡಿಲ್ಲ. ಆದ್ರೆ ಕೇಂದ್ರ ಸರ್ಕಾರದವರು 15 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು
ಮೈಸೂರಿನಲ್ಲಿ ನಿರ್ಮಲಾ ವಿರುದ್ಧ ಸಿಎಂ ಸಿದ್ದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ವಿಭಿನ್ನವಾಗಿದೆ ತರುಣ್-ಸೋನಾಲ್ ವೆಡ್ಡಿಂಗ್ ಕಾರ್ಡ್ : ಏನಿದರ ವಿಶೇಷತೆ?