ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಒಂದಿಲ್ಲೊಂದು ವಿಚಾರಗಳಿಂದ ಸದಾ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಿವಿ ರೀಲ್ಸ್ ಮೂಲಕ ಸಖತ್ ಫೇಮ್ ಪಡೆದಿದ್ದಾರೆ. ವಿದೇಶದಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡ ನಟಿ ಒಂದು ದಿನ ನ್ಯೂಯಾರ್ಕ್, ಲಂಡನ್ ಎಂದೆಲ್ಲಾ ಎಂಜಾಯ್ ಮಾಡುತ್ತಿದ್ದಾರೆ.
ಇದೀಗ ವಿದೇಶದಲ್ಲಿಯೇ ಇರುವ ನಿವೇದಿತಾ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಯೊಂದನ್ನು ಮೈಮೇಲೆ ಬಿಟ್ಟುಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿ, ನಾನು ಭೇಟಿಯಾದ ಕೆಲವು ಜನರಂತೆ ಖಂಡಿತವಾಗಿಯೂ ಭಯಾನಕವಲ್ಲ! ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ತಮ್ಮ ಜೀವನದಲ್ಲಿ ಬಂದಿರುವ ಕೆಲವು ವ್ಯಕ್ತಿಗಳು ಎನ್ನುವ ಅರ್ಥದಲ್ಲಿ ನಿವೇದಿತಾ ಹೀಗೆ ಬರೆದಿದ್ದರೂ, ಇದು ಯಾರೋ ಒಬ್ಬ ವ್ಯಕ್ತಿಗೆ ಕೊಟ್ಟಿರೋ ಟಾಂಟ್ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಈಗಾಗಲೇ ನಿವೇದಿತಾ ಕ್ರಿಸ್ಮಸ್ನಲ್ಲಿ ವೈನ್ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್ಲೋಡ್ ಮಾಡಿದ್ದರು. ಕ್ರಿಸ್ಮಸ್ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ನಿನ್ನೆ ಹೊಸ ವರ್ಷದ ಸೆಲಬ್ರೇಷನ್ ವೇಳೆ ಕಂಬವನ್ನು ಏರಿರುವ ವಿಡಿಯೋ ಶೇರ್ ಮಾಡಿ ಸಕತ್ ಟ್ರೋಲ್ಗೂ ಒಳಗಾಗಿದ್ದರು.
ಇದನ್ನೂ ಓದಿ : ಮಂಡ್ಯ : ಪುರಸಭೆ ಹೆಸರಲ್ಲಿ ಸೈಬರ್ ಕಳ್ಳರ ಹಾವಳಿ – ಅಂಗಡಿ ಮಾಲೀಕರನ್ನೇ ಟಾರ್ಗೆಟ್ ಮಾಡಿ ಟಾರ್ಚರ್..!