ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಮೂಲಕವೇ ಸಖತ್ ಫೇಮ್ ಪಡೆದವರು. ಆಗಾಗ ಹಾಟ್ ಫೋಟೋಸ್‌ಗಳನ್ನು ಶೇರ್ ಮಾಡಿಕೊಳ್ಳುತ್ತ ಸದಾ ಸುದ್ದಿಯಲ್ಲಿರುತ್ತಾರೆ. ಥೈಲ್ಯಾಂಡ್‌ನಲ್ಲಿ ಹೊಸ ವರ್ಷವನ್ನ ಸೆಲೆಬ್ರೆಟ್ ಮಾಡಿ ಸಖತ್ ಸುದ್ದಿಯಾಗಿದ್ದ ನಿವಿ ಇದೀಗ ಟ್ರಾನ್ಸ್‌ಪರೆಂಟ್ ಡ್ರೆಸ್ ತೊಟ್ಟು ಸೂರ್ಯನ ಬೆಳಕಲ್ಲಿ ಪೋಸ್ ಕೊಟ್ಟಿದ್ದಾರೆ.
ಈಗ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ನಿವೇದಿತಾ ಗೌಡ ಟ್ರಾನ್ಸ್‌ಪರೆಂಟ್ ನೆಟೆಡ್ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅದಕ್ಕೆ “ಸನ್ ಕಿಸ್” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಹಾಗಂತ ಕೇವಲ ಫೋಟೊ ಅಷ್ಟೇ ಅಲ್ಲ. ಸೂರ್ಯನ ಕಿರಣಗಳು ಸೋಕುವಂತೆ ಕ್ಯಾಮರಾ ಪೋಸ್ ಕೊಟ್ಟು, ಅದನ್ನು ವಿಡಿಯೋ ಮಾಡಿ, ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿವೇದಿತಾ ಗೌಡ ಫೋಟೊಗಳನ್ನು ಶೇರ್ ಮಾಡಿದರೇ ಬಿಡೋದಿಲ್ಲ. ಇನ್ನು ಹೀಗೆ ನೆಟೆಡ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟು ವಿಡಿಯೋ ಮಾಡಿದರೆ ನೆಟ್ಟಿಗರು ಸುಮ್ಮನಿರುತ್ತಾರಾ? ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವು ಕಾಮೆಂಟ್‌ಗಳನು ಪಾಸಿಟಿವ್ ಆಗಿದ್ದರೆ, ಮತ್ತೆ ಕೆಲವು ಕಾಮೆಂಟ್‌ಗಳು ನೆಗೆಟಿವ್ ಆಗಿವೆ.
ನೆಟ್ಟಿಗರೊಬ್ಬರು ನಿವೇದಿತಾ ಗೌಡ ಡ್ರೆಸ್ ನೋಡಿ ಎಲ್ಲಾ ಓಕೆ ಆ ಗೋಣಿ ಚೀಲ ಯಾಕೆ? ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ದಿನಾನೂ ಇದೆ ಆಗೋಯ್ತು ಈ ಯಮ್ಮಂದು ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದ್ರೆ ಈ ತರ ಇರಬೇಕು ಕೆಂಪು ಒಳಗಿದ್ದರು ಮರ್ಯಾದೆ ಹೋಗದಂತೆ ಎಂದು ಡ್ರೆಸ್‌ಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಕೋರ್ಟ್ ಹಾಲ್ನಲ್ಲಿ “ಸುಬ್ಬ-ಸುಬ್ಬಿ” ಮುಖಾಮುಖಿ.. ನಟ ದರ್ಶನ್ ಕಂಡು ಪವಿತ್ರಾ ಗೌಡ ಕಣ್ಣೀರ ಧಾರೆ..!