ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಹಬ್ಬ ಅದ್ದೂರಿಯಾಗಿ ನೆರವೇರಿದೆ. ಅಂಬಾನಿ ಕುಟುಂಬ ಏರ್ಪಡಿಸಿದ್ದ ಚೌತಿ ಸಂಭ್ರಮದಲ್ಲಿ ಬಾಲಿವುಡ್ ನಟ, ನಟಿಯರು ಭಾಗಿಯಾಗಿ ವಿನಾಯಕನ ಆಶೀರ್ವಾದ ಪಡೆದಿದ್ದಾರೆ. ಸದ್ಯ ಚೌತಿ ಆಚರಣೆಯಲ್ಲಿ ಪಾಲ್ಗೊಂಡಿರುವ ಸೆಲೆಬ್ರಿಟಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅನಂತ್ ಮತ್ತು ರಾಧಿಕಾ ಜೊತೆ ನೀತಾ ಅಂಬಾನಿ ಕೂಡ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದು, ಪೋಟೊಗಳೆಲ್ಲ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಅಂಬಾನಿ ಕುಟುಂಬದ ಗಣೇಶ ಮೆರವಣಿಗೆ ವಿಡಿಯೋಂದು ವೈರಲ್ ಆಗಿದೆ. ಇದ್ರಲ್ಲಿ ನೀತಾ ಅಂಬಾನಿ, ಅವರ ತಾಯಿ, ಅನಂತ್ ಅಂಬಾನಿ ಮತ್ತು ರಾಧಿಕಾರನ್ನು ಕಾಣಬಹುದು. ರಾಧಿಕಾಗೆ ಮದುವೆ ಆದ್ಮೇಲೆ ಅನಂತ್ ಅಂಬಾನಿ ಮನೆಯಲ್ಲಿ ಮೊದಲ ಹಬ್ಬವಾಗಿದ್ದು, ರಾಧಿಕಾ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಆದ್ರೆ ರಾಧಿಕಾ ಹಾಗೂ ನೀತಾ ಅಂಬಾನಿ ಮಧ್ಯೆ ಇರುವ ವ್ಯತ್ಯಾಸ ಕಂಡು ಹಿಡಿಯಲು ಟ್ರೋಲರ್ಸ್ ಮುಂದಾಗಿದ್ದಾರೆ.
ನೀತಾ ಅಂಬಾನಿ ಇನ್ಸ್ಟಾಗ್ರಾಮ್ನಲ್ಲಿ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. ದೊಡ್ಡ ಲಾರಿಯಲ್ಲಿ ಗಣೇಶ ವಿಸರ್ಜನೆಗೆ ಅಂಬಾನಿ ಕುಟುಂಬ ಹೊರಟಿತ್ತು. ನೀತಾ ಅಂಬಾನಿ ಜನರಿಗೆ ಕೈ ಮುಗಿಯುತ್ತಾ ಹೋಗುವ ವೇಳೆ ಕೆಳಗೆ ನಿಂತ ಜನರಿಗೆ ಪ್ರಸಾದವನ್ನು ಕೈಯಲ್ಲಿ ನೀಡದೇ ಎಸೆದಿದ್ದಾರೆ. ಒಬ್ಬೊಬ್ಬರಿಗೆ ನೀತಾ ಅಂಬಾನಿ ಪ್ರಸಾದ ಎಸೆದಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಈ ವಿಡಿಯೋ ನೋಡಿದ ನೆಟ್ಟಿಗರು ‘ಪ್ರಸಾದವನ್ನು ಯಾವಾಗ್ಲೂ ಎಸೆಯಬಾರದು. ನೀತಾ ಅಂಬಾನಿಗೆ ಹಿಂದೂ ಪದ್ಧತಿ ತಿಳಿದಿಲ್ಲ. ಅವರನ್ನು ಭಾರತದಿಂದ ಓಡಿಸಿ ಅಂತ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಅವರು ಅಂಬಾನಿ ಪತ್ನಿ, ಏನ್ ಬೇಕಾದ್ರೂ ಮಾಡ್ಬಹುದು ಅಂತ ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು ಹಣ ಬೇಕಾದಷ್ಟಿದೆ. ಆದ್ರೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ನೀತಾ ಅಂಬಾನಿಗೆ ಏನೂ ತಿಳಿದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮುಂಬೈನಲ್ಲಿ ಪ್ರಸಾದವನ್ನು ಎಸೆಯೋದು ಕಾಮನ್, ಮೆರವಣಿಗೆ ವೇಳೆ ಕೆಳಗೆ ನಿಂತ ಜನರಿಗೆ ಪ್ರಸಾದವನ್ನು ಎಸೆಯುತ್ತಾರೆ. ಜನರು ಅದನ್ನು ಕ್ಯಾಚ್ ಹಿಡಿಯುತ್ತಾರೆ. ಇದೇ ಅವರಿಗೆ ಖುಷಿ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಮಧ್ಯೆ ರಾಧಿಕಾ ಮರ್ಚೆಂಟ್ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಾಧಿಕಾ ಕೆಳಗೆ ನಿಂತಿರುವ ಜನರಿಗೆ ಪ್ರಸಾದವನ್ನು ಎಸೆಯದೆ ಕೈಯಲ್ಲಿ ನೀಡಿದ್ದಾರೆ. ದೂರ ಇರುವ ಜನರಿಗೆ ಪ್ರಸಾದ ಕೊಡುವಂತೆ ಲಾರಿ ಕೆಳಗೆ ನಿಂತ ಜನರಿಗೆ ರಾಧಿಕಾ ಹೇಳಿದ್ದಾರೆ. ಹಾಗಾಗಿ ಈಗ ಜನ ರಾಧಿಕಾ ಹಾಗೂ ನೀತಾ ಅಂಬಾನಿ ಮಧ್ಯೆ ಇರುವ ವ್ಯತ್ಯಾಸವನ್ನು ಇದ್ರಿಂದ ಅಳೆಯುತ್ತಿದ್ದಾರೆ. ರಾಧಿಕಾಗೆ ಭಾರತದ ಸಂಪ್ರದಾಯ ಗೊತ್ತಿದೆ. ಪ್ರಸಾದವನ್ನು ಎಸೆಯುವ ಬದಲು ಕೈಯಲ್ಲಿ ನೀಡ್ತಿದ್ದಾರೆಂದು ನಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಚಾರ್ಜ್ಶೀಟ್ ಮಾಹಿತಿ ಪ್ರಸಾರ ನಿರ್ಬಂಧ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್..!