ಬೆಂಗಳೂರು : ಕಣ್ಣೀರು ಒರೆಸುವವನೇ ಜನನಾಯಕ, ಕಣ್ಣೀರು ಸುರಿಸೋನಲ್ಲ. ಎಲೆಕ್ಷನ್ ಬಂದರೆ ಸಾಕು ಹೆಚ್ಡಿಕೆ ಫ್ಯಾಮಿಲಿ ಕಣ್ಣೀರು ಹಾಕುತ್ತೆ, ನಿಖಿಲ್ ಹಾಕಿದ್ದು ನಾಟಕೀಯದ ಕಣ್ಣೀರು.
ಅನುಕಂಪ ಗಿಟ್ಟಿಸಿಕೊಳ್ಳಲು ಕಣ್ಣೀರು ಹಾಕಿದ್ದಾರೆ ಎಂದು ನಿಖಿಲ್ ಕಣ್ಣೀರಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಚುನಾವಣೆ ಬಂದಾಗ ಅವರಿಗೆ ಕಣ್ಣೀರು ಬರುತ್ತೆ. ಚನ್ನಪಟ್ಟಣದಲ್ಲಿ ಕಣ್ಣೀರು ರಾಜಕೀಯ ಶುರುವಾಗುತ್ತೆ ಎಂದಿದ್ದೆ, ಈಗ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಗ್ಯಾರಂಟಿ ವಿಚಾರ ಸಂಬಂಧ ಮಾತನಾಡಿ, ಕರ್ನಾಟಕದ ಗ್ಯಾರಂಟಿ ದೇಶಕ್ಕೇ ಮಾದರಿಯಾಗಿವೆ, ಯೋಜನೆ ಬಗ್ಗೆ ಪರ-ವಿರೋಧ ಇದ್ದೇ ಇರುತ್ತೆ. ಸರ್ಕಾರದ ಕಾರ್ಯಕ್ರಮಗಳನ್ನು ಟೀಕೆಗಾಗಿ ವಿರೋಧಿಸಬಾರದು, ಪ್ರಧಾನಿಯಾದವರು ಇಂಥಾ ಹೇಳಿಕೆ ಕೊಡೋದು ಸರಿಯಲ್ಲ. ಸಿಎಂ, ಡಿಸಿಎಂ ಯಾವ್ದೇ ರೀತಿ ಗ್ಯಾರಂಟಿ ಬಗ್ಗೆ ಚರ್ಚೆ ಮಾಡಿಲ್ಲ. ಎಲ್ಲೋ ಒಂದೆರಡು ಲೋಪ ದೋಷ ಆಗಿದೆ ಅಷ್ಟೇ, ಉಚಿತ ಬಸ್ ಯೋಜನೆ ಪರಿಷ್ಕರಣೆ ಅನ್ನೋ ಮಾತು ಇಲ್ಲ. ನಮ್ಗೆ ಅಕ್ಕಿ ಹಣ ಬೇಡ , 5 ಕೆಜಿ ಅಕ್ಕಿನೇ ಕೊಡಿ ಅಂತ ಹೇಳ್ತಾರೆ. ಅವಶ್ಯಕತೆ ಎಷ್ಟು ಜನಕ್ಕೆ ಇದೆ ಅನ್ನೋದು ನೋಡ್ತೀವಿ ಅಷ್ಟೇ, ಬಿಜೆಪಿಯವರೇ ನಮ್ಮ ಗ್ಯಾರಂಟಿ ಕಾಪಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಎಲೆಕ್ಷನ್ ಸಂದರ್ಭದಲ್ಲಿ ಬಿಜೆಪಿಯವರು ಗ್ಯಾರಂಟಿ ಘೋಷಿಸುತ್ತಿದ್ದಾರೆ, ನಮ್ಮ ಗ್ಯಾರಂಟಿಗೆ ಸಿಕ್ಕಿರೋ ಪ್ರಚಾರದಿಂದ ಬಿಜೆಪಿ ಕಂಗೆಟ್ಟಿದೆ. ಮಹಾರಾಷ್ಟ್ರ, ಜಾರ್ಖಂಡ್ ಎಲೆಕ್ಷನ್ಗಾಗಿ ಈ ಟೀಕೆ ಮಾಡ್ತಿದ್ದಾರೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಉತ್ತರ ವಿಭಾಗದ AC ಪ್ರಮೋದ್ ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ – EDಗೆ ದೂರು..!