ಬಿಗ್ಬಾಸ್ ಸೀಸನ್ 11 ನನ್ನ ಕೊನೆಯ ಸೀಸನ್ ಎಂದು ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಆದ್ರೆ ಶನಿವಾರದ ಕಿಚ್ಚನ ಪಂಚಾಯತಿ ವೇದಿಕೆ ಮೇಲೆ ಸುದೀಪ್ ಆಡಿದ ಮಾತು ಕೇಳಿದ ಫ್ಯಾನ್ಸ್, ಕಿಚ್ಚ ಮನಸ್ಸು ಬದಲಿಸಿದ್ರಾ ಎಂದು ಕೇಳ್ತಿದ್ದಾರೆ.
ಅಮ್ಮನ ಅಗಲಿಕೆಯ ದುಃಖದಲ್ಲಿದ್ದ ಸುದೀಪ್ ಕಳೆದ ವಾರ ಕಿಚ್ಚನ ಪಂಚಾಯಿತಿ ಶೋ ನಡೆಸಿಕೊಡಲಿಲ್ಲ. ಈ ವಾರ ವೇದಿಕೆ ಮೇಲೆ ಬಂದ್ರು ಅದೇ ಸ್ಟೈಲ್ನಲ್ಲೇ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋಕ್ಷಿತಾ ಹಾಗೂ ಮಂಜುಗೆ ಕೂಲ್ ಆಗಿಯೇ ಕಿವಿ ಮಾತು ಹೇಳಿದ ಕಿಚ್ಚ ಶೋ ಬಗ್ಗೆ ಹೇಳಿದ್ದೇನು ಗೊತ್ತಾ?
ಮೋಕ್ಷಿತಾ ಕೇವಲ 10 ವಾರ ಇದ್ದು ಹೋಗ್ತಾರೆ ಎಂದಿದ್ದ ತ್ರಿವಿಕ್ರಮ್ ಮೇಲೆ ಮೋಕ್ಷಿತಾ ರಾಂಗ್ ಆಗಿದ್ರು. ನಿಮ್ಮ ಕೋಪಕ್ಕೆ ಕಾರಣ ಏನು? ಮೊದಲೇ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಸುದೀಪ್ ಕೇಳಿದ್ರು. ಇದಕ್ಕೆ ಉತ್ತರಿಸಿದ ಮೋಕ್ಷಿತಾ, ಮಂಜು ಕೇಳೋದು ಬೇಡ ಅಂದಿದ್ರು ಅದಕ್ಕೆ ನಾನು ಕೇಳಿರಲಿಲ್ಲ ಎಂದು ಮೋಕ್ಷಿತಾ ಹೇಳಿದ್ರು.
ಮೋಕ್ಷಿತಾ ಮಾತು ಕೇಳಿದ ಕಿಚ್ಚ ಸುದೀಪ್, ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ ಎಂದು ಮನವರಿಕೆ ಮಾಡಿಕೊಟ್ರು. ಈ ವೇಳೆ ಸುದೀಪ್, ಈ ಸೀಸನ್ ಬೇಡ ಅಂದ್ರು ಬಿಡಲಿಲ್ಲಾ, ಸಾಕಪ್ಪಾ ಬಿಟ್ಟುಬಿಡ್ರಪ್ಪಾ ಅಂದ್ರು ಬಿಡ್ತಿಲ್ಲ. ಮುಂದಿನ ಸೀಸನ್, ಮುಂದಿನ ಸೀಸನ್ ಅಂತ ಮಾಡಿಸಿದ್ರು.
ನಾನು ಮಾಡಲ್ಲ ಎನ್ನುತ್ತಿದ್ದಂತೆ. ವೇದಿಕೆಗೆ ಅವರು ಬರ್ತಾರೆ? ಇವರು ಬರ್ತಾರೆ ಎಂದು 2-3 ಹೆಸರುಗಳು ಕೇಳಿ ಬರ್ತಾನೆ ಇದೆ. ನಾನು ಯಾರೋ ಬಂದು ನನ್ನ ವೇದಿಕೆ ಕಿತ್ತುಕೊಳ್ತಾರೆ ಎನ್ನುವ ಯೋಚನೆ ಮಾಡ್ಬೇಕಾ? ಅಥವಾ ವೇದಿಕೆ ಮೇಲೆ ನಾನು ನಿಂತ್ರೆನೇ ಈ ವೇದಿಕೆಗೆ ತೂಕ ಜಾಸ್ತಿ ಅನ್ನೋ ಕಾನ್ಫಿಡೆನ್ಸ್ ನಲ್ಲಿ ನಿಲ್ಬೇಕಾ ಎಂದು ಹೇಳಿದೆ ಕಿಚ್ಚ ಸುದೀಪ್, ಮೀಸೆ ತಿರುಗಿದ್ರು.
ಕಿಚ್ಚನ ಮಾತು ಕೇಳಿದ ಫ್ಯಾನ್ಸ್ ಚಪ್ಪಾಳೆ ತಟ್ಟಿದ್ದಾರೆ. ಸುದೀಪ್ ಇದ್ದರಷ್ಟೇ ಬಿಗ್ ಬಾಸ್ ಶೋಗೆ ಶೋಭೆ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಸುದೀಪ್ ಮಾತು ಕೇಳಿದ್ರೆ, ಮನಸ್ಸು ಬದಲಿಸಿ ಮುಂದಿನ ಸೀಸನ್ಗೂ ಬರ್ತಾರೆ ಎಂದು ಜನ ಹೇಳ್ತಿದ್ದಾರೆ.