Download Our App

Follow us

Home » ಅಂತಾರಾಷ್ಟ್ರೀಯ » ನ್ಯೂ ಇಯರ್​​ ಸೆಲೆಬ್ರೇಷನ್​ಗೆ ಸೇರಿದ್ದ ಜನರ ಮೇಲೆ ಟ್ರಕ್ ಹತ್ತಿಸಿದ ಚಾಲಕ – 10 ಮಂದಿ ಸಾವು..!

ನ್ಯೂ ಇಯರ್​​ ಸೆಲೆಬ್ರೇಷನ್​ಗೆ ಸೇರಿದ್ದ ಜನರ ಮೇಲೆ ಟ್ರಕ್ ಹತ್ತಿಸಿದ ಚಾಲಕ – 10 ಮಂದಿ ಸಾವು..!

ಹೊಸ ವರ್ಷದ ದಿನದಂದು ನ್ಯೂ ಓರ್ಲಿಯನ್ಸ್‌ನಲ್ಲಿ ಜನಸಂದಣಿಯ ಮೇಲೆ ಟ್ರಕ್​ ನುಗ್ಗಿದ ಪರಿಣಾಮ 10 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಪಿಕಪ್ ಟ್ರಕ್ ಚಾಲಕ ಜನರ ಮೇಲೆ ನುಗಿಸಿದ್ದಷ್ಟೇ ಅಲ್ಲದೇ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.

ಕೆನಾಲ್ ಮತ್ತು ಬೌರ್ಬನ್ ಅನ್ನೋ ಪ್ರದೇಶದಲ್ಲಿ ಸೆಲಬ್ರೇಟ್​ ಮಾಡುವಾಗ ಜನರ ಮೇಲೆ ಟ್ರಕ್​​ ನುಗ್ಗಿಸಲಾಗಿದೆ. ಇನ್ನು, ಜನರ ಮೇಲೆ ಟ್ರಕ್​ ಹತ್ತಿಸಿದ ಚಾಲಕನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಗಾಯಗೊಂಡ ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರಕ್​​ ಚಾಲಕನನ್ನು ಅರೆಸ್ಟ್​ ಮಾಡಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಹಿಂದೆ ಜರ್ಮನಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಂದು ದಾಳಿಯಲ್ಲಿ 5 ಜನ ಸಾವನ್ನಪ್ಪಿದ್ದರು. ಇಡೀ ಜರ್ಮನ್​​ ಈ ಸುದ್ದಿ ಕೇಳಿ ಬೆಚ್ಚಿಬಿದ್ದಿತ್ತು. ಸದ್ಯ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.

ಇದನ್ನೂ ಓದಿ : ಬಿಗ್​​ಬಾಸ್​ ಮನೆಯಲ್ಲಿ ಐಶು ಕ್ರಶ್ ಯಾರು? – ಶಿಶಿರ್ ಬಗ್ಗೆ ಐಶ್ವರ್ಯಾ ಮನಬಿಚ್ಚಿ ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

ರೂಟ್ ಚೇಂಜ್​ ಮಾಡಿದ್ದ ಡ್ರೈವರ್​ ಅರೆಸ್ಟ್ – ಆಟೋದಿಂದ ಜಿಗಿದಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​.. ಡಿಸಿಪಿ ಹೇಳಿದ್ದೇನು?

ಬೆಂಗಳೂರು : ಮಹಿಳಾ ಪ್ರಯಾಣಿಕರೊಬ್ಬರನ್ನು ನಿಗದಿತ ಮಾರ್ಗ ಬದಲಿಸಿ ಮತ್ತೊಂದು ಕಡೆ ಕರೆದೊಯ್ದ ಪ್ರಕರಣ ಸಂಬಂಧ ಆಟೋ ಚಾಲಕ ಸುನೀಲ್​ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ

Live Cricket

Add Your Heading Text Here