Download Our App

Follow us

Home » ರಾಷ್ಟ್ರೀಯ » ನೇಪಾಳದಲ್ಲಿ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನ..!

ನೇಪಾಳದಲ್ಲಿ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನ..!

ನೇಪಾಳ : ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 19 ಮಂದಿ ಪ್ರಪ್ರಯಾಣಿಕರಿದ್ದ ಶೌರ್ಯ ಏರ್‌ಲೈನ್ಸ್​ನ ವಿಮಾನ (CRJ-200) ಟೇಕಾಫ್​ ಆಗುವಾಗಲೇ ಪತನಗೊಂಡಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿ ಇಬ್ಬರು ವಿಮಾನ ಸಿಬ್ಬಂದಿ ಸೇರಿದಂತೆ 19 ಮಂದಿ ಪ್ರಯಾಣಿಸುತ್ತಿದ್ದರು.

ವರದಿಗಳ ಪ್ರಕಾರ, ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ರನ್‌ವೇಯಿಂದ ಸ್ಕಿಡ್ ಆಗಿ ಪತನಗೊಂಡಿದೆ ಎನ್ನಲಾಗಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಘಟನಾ ಸ್ಥಳಕ್ಕೆ ತುರ್ತು ಸೇವೆಗಳನ್ನು ನಿಯೋಜಿಸಲಾಗಿದೆ.

ಘಟನೆಯಲ್ಲಿ ಪೊಖಾರಾ ಮೂಲದ ವಿಮಾನ ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ವೈದ್ಯಕೀಯ ತಂಡ ಸಿಬ್ಬಂದಿ ಆಗಮಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್  ದೌಡಾಯಿಸಿದೆ. ಯಾವುದೇ ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.

ಇದನ್ನೂ ಓದಿ : KRS ಡ್ಯಾಂ ಬಳಿ ನೀರಿನ ರಭಸಕ್ಕೆ ತಡೆಗೋಡೆ ಕುಸಿತ – ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here