ನೆಲಮಂಗಲ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ಶಿವಗಂಗೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಂದು ಸಂಜೆ 6 ಗಂಟೆಯಿಂದ 1-1-2025ರ ಮಧ್ಯರಾತ್ರಿ 12 ಗಂಟೆ ಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ನೆಲಮಂಗಲ ತಾಲೂಕಿನಲ್ಲಿರುವ ಐತಿಹಾಸಿಕ ಶಿವಗಂಗೆ ಬೆಟ್ಟದಲ್ಲಿ ಪ್ರವಾಸಿಗರ ಮೋಜು ಮಸ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಡಾಬಸ್ ಪೇಟೆ ಪೊಲೀಸರು ನಿಷೇಧ ಹೇರಿದ್ದಾರೆ.
ಶಿವಗಂಗೆಯು ಸಮುದ್ರ ಮಟ್ಟದಿಂದ 4,559 ಅಡಿ ಎತ್ತರವಿರುವ ಪವಿತ್ರ ಬೆಟ್ಟವಾಗಿದೆ. ಶಿವಗಂಗೆ ಬೆಟ್ಟದ ರೂಪರೇಖೆಯು ಪೂರ್ವದಿಂದ ಗೂಳಿಯಾಗಿ, ಪಶ್ಚಿಮದಿಂದ ಗಣೇಶನಾಗಿ, ಉತ್ತರದಿಂದ ಸರ್ಪವಾಗಿ ಮತ್ತು ದಕ್ಷಿಣದಿಂದ ಲಿಂಗವಾಗಿ ಕಾಣುತ್ತದೆ. ಮೇಲಕ್ಕೆ ಹೋಗುವ ಮೆಟ್ಟಿಲುಗಳ ಸಂಖ್ಯೆಯು ಬನಾರಸ್‌ಗೆ ಯೋಜನಗಳ ಸಂಖ್ಯೆಯನ್ನು ಸಮನಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ದಕ್ಷಿಣ ಕಾಶಿ ಎಂತಲೂ ಕರೆಯಲಾಗುತ್ತದೆ.
ಶಿವಗಂಗೆಯಲ್ಲಿ ಗಂಗಾಧರೇಶ್ವರ ದೇವಸ್ಥಾನ, ಶ್ರೀ ಹೊನ್ನಮ್ಮದೇವಿ ದೇವಸ್ಥಾನ, ಒಳಕಲ್ ತೀರ್ಥ, ನಂದಿ ಪ್ರತಿಮೆ, ಪಾತಾಳಗಂಗೆ ಶಾರದಾಂಬೆ ದೇವಸ್ಥಾನ ಮತ್ತು ಅಗಸ್ತ್ಯ ತೀರ್ಥ, ಕಣ್ವ ತೀರ್ಥ, ಕಪಿಲ ತೀರ್ಥ, ಪಾತಾಳ ಮುಂತಾದ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಇಂದು ಸಂಜೆ 6 ಗಂಟೆಯಿಂದ ಜನವರಿ 1, 2025ರ ಮಧ್ಯರಾತ್ರಿ 12 ಗಂಟೆಯವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಡಾಬಸ್ ಪೇಟೆ ಪೊಲೀಸರು ನಿಷೇಧ ಹೇರಿದ್ದಾರೆ. ಹಾಗಾಗಿ ಹೊಸ ವರ್ಷಕ್ಕೆ ಶಿವಗಂಗೆಗೆ ಹೋಗುವ ಪ್ಲ್ಯಾನ್ ಮಾಡಿದ್ರೆ ಕ್ಯಾನ್ಸಲ್ ಮಾಡಿ ಬೇರೆ ದಿನಕ್ಕೆ ಮುಂದೂಡಿ.
ಇದನ್ನೂ ಓದಿ : “ಗೋಲ್ಡ್” ವಂಚಕಿ ಐಶ್ವರ್ಯಾ ಗೌಡ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್ ಕಂಪ್ಲೇಂಟ್..!