ನೆಲಮಂಗಲ : ನೆಲಮಂಗಲ ಸಮೀಪ ಡಿಸೆಂಬರ್ 21ರಂದು ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಜನರು ಸಾವಿಗೀಡಾದ ಘಟನೆ ನಡೆದಿತ್ತು. ಇದೀಗ ಬಿಟಿವಿಗೆ ಕಾರಿನಲ್ಲಿ ಚಂದ್ರಮ್ ಕುಟುಂಬ ತೆರಳುವ ವಿಡಿಯೋ ಬಿಟಿವಿಗೆ ಲಭ್ಯವಾಗಿದೆ.
2 ತಿಂಗಳ ಹಿಂದಷ್ಟೇ ವೋಲ್ವೋ-XD 90 ಕಾರು ಖರೀದಿಸಿದ್ದ IAST Software Solutions ಕಂಪನಿ ಮಾಲೀಕ ಚಂದ್ರಮ್ ಯೇಗಪ್ಪಗೋಳ್, ಕುಟುಂಬ ಜೊತೆ ವೀಕೆಂಡ್ ಪ್ರವಾಸಕ್ಕೆ ಹೊರಟಿದ್ದರು. ತಾಳೇಕೆರೆ ಗೇಟ್ ಬಳಿ ತೆರಳುತ್ತಿದ್ದಾಗ ತುಮಕೂರು ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ನಿಯಂತ್ರಣ ತಪ್ಪಿ ಮತ್ತೊಂದು ಪಥಕ್ಕೆ ಹಾರಿ ಕಾರ್ ಮೇಲೆ ಬಿದ್ದಿದ್ದು,
ಕಾರಿನಲ್ಲಿದ್ದ ಚಂದ್ರಮ್ ಸೇರಿ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ.
ನೆಲಮಂಗಲ ಟೋಲ್ ಸಿಸಿ ಕ್ಯಾಮರದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಈ ದೃಶ್ಯದಲ್ಲಿ ಕಾರಿನಲ್ಲಿದ್ದ ಮಕ್ಕಳು ನಗುನಗುತ್ತ ಅತ್ತ ಇತ್ತ ನೋಡುತ್ತ ಇರುವುದನ್ನು ನೋಡಬಹುದು. ಆದರೆ ವಿಧಿಯಾಟಕ್ಕೆ 8 ಕಿಲೋಮೀಟರ್ ದೂರ ಸಾಗುವ ವೇಳೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : ‘ಚೈತ್ರಾದ್ದು ಬರೀ ಡೌವ್ಗಳು ಸರ್’ - ರಜತ್ ಮಾತಿಗೆ ಬಿದ್ದು ಬಿದ್ದು ನಕ್ಕ ಸುದೀಪ್..!