Download Our App

Follow us

Home » ರಾಜ್ಯ » ಸಿಎಂ ಸಿದ್ದರಾಮಯ್ಯ ಎದುರೇ 6 ನಕ್ಸಲರ ಶರಣಾಗತಿ – ಇಂದು ಬೆಂಗಳೂರಿನಲ್ಲಿ ಮುಖ್ಯವಾಹಿನಿಗೆ..!

ಸಿಎಂ ಸಿದ್ದರಾಮಯ್ಯ ಎದುರೇ 6 ನಕ್ಸಲರ ಶರಣಾಗತಿ – ಇಂದು ಬೆಂಗಳೂರಿನಲ್ಲಿ ಮುಖ್ಯವಾಹಿನಿಗೆ..!

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗಬೇಕಿದ್ದ ಆರು ಮಂದಿ ನಕ್ಸಲರು ಇಂದು ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ
ಶರಣಾಗತರಾಗಲಿದ್ದಾರೆ. ಈ ಮೂಲಕ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ. ವಸಂತ್​ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ.

ನಿಗದಿ ಪ್ರಕಾರ ಇಂದು ಬೆಳಗ್ಗೆ 10 ಗಂಟೆಗೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಬೇಕಿತ್ತು. ಆದರೆ ಕೊನೆ ಕ್ಷಣದ ಬದಲಾವಣೆ ಎಂಬಂತೆ ಇಂದು ಬೆಂಗಳೂರಿನಲ್ಲಿ ಸಿಎಂ ಮುಂದೆ ಶರಣಾಗಲಿದ್ದಾರೆ. ಚಿಕ್ಕಮಗಳೂರಿನಿಂದ ಬರಲು ಸರ್ಕಾರದಿಂದಲೇ 6 ನಕ್ಸಲರಿಗೆ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

ಇದೀಗ ನಕ್ಸಲರು ಮತ್ತು ಅವರ ಕುಟುಂಬ ಸದಸ್ಯರು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಈಗ ತೆರಳುತ್ತಿದ್ದಾರೆ. ಹೋರಾಟಗಾರರು, ಸಂಬಂಧಿಕರು, ಮಾಜಿ ನಕ್ಸಲರು, ಸಮಿತಿ ಸದಸ್ಯರೂ ಬೆಂಗಳೂರಿನತ್ತ ತೆರಳುತ್ತಿದ್ದಾರೆ.

ಇದನ್ನೂ ಓದಿ : ಯಶ್‌ ಬರ್ತ್‌ಡೇಗೆ ‘ಟಾಕ್ಸಿಕ್’ ಝಲಕ್ – ಪಾರ್ಟಿ ಮೂಡ್‌ನಲ್ಲಿ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟ ರಾಕಿಭಾಯ್!

Leave a Comment

DG Ad

RELATED LATEST NEWS

Top Headlines

ಪ್ರಯಾಣಿಕರಿಗೆ ಮತ್ತೊಂದು ಬಿಗ್​ ಶಾಕ್ – ಟಿಕೆಟ್​ ಬೆನ್ನಲ್ಲೇ ಬಸ್ ಪಾಸ್ ದರವೂ ದುಬಾರಿ.. ಇಲ್ಲಿದೆ ಡೀಟೇಲ್ಸ್​!

ಬೆಂಗಳೂರು : ಹೊಸ ವರ್ಷಕ್ಕೆ ಹೊರೆ ​ಎಂಬಂತೆ ಕರ್ನಾಟಕ ಸಾರಿಗೆ ಇಲಾಖೆ ಕೆಲ ದಿನಗಳ ಹಿಂದೆಷ್ಟೇ ನಾಲ್ಕೂ ನಿಗಮಗಳ ಬಸ್​ ಟಿಕೆಟ್​ ದರ ಶೇ 15 ರಷ್ಟು

Live Cricket

Add Your Heading Text Here