ಉಡುಪಿ : ನಕ್ಸಲ್ ನಿಗ್ರಹ ದಳದ(ANF) ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂಗೌಡ ಮೃತ ದೇಹವನ್ನು ನಿನ್ನೆ ಘಟನಾ ಸ್ಥಳದಿಂದ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಇಂದು ಕಾರ್ಕಳ ನ್ಯಾಯಾಧೀಶರ ಸಮ್ಮುಖದಲ್ಲಿ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ವಿಕ್ರಂಗೌಡನ ಮರಣೋತ್ತರ ಪರೀಕ್ಷೆ ನಡೆಸಿ, ಆ ಬಳಿಕ ಮೃತದೇಹವನ್ನು ಪೊಲೀಸರು ವಿಕ್ರಂ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.
ವಿಕ್ರಂಗೌಡ ಹುಟ್ಟೂರು ಹೆಬ್ರಿ ತಾಲೂಕಿನ ಕೂಡ್ಲು ಬಳಿಯ ನಾಲ್ಪಾಡು ಗ್ರಾಮದಲ್ಲಿ ಕುಟುಂಬ ವರ್ಗ, ಸಂಬಂಧಿಕರ ಸಮ್ಮುಖದಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದ್ದು, ವಿಕ್ರಂಗೌಡ ಆಪ್ತ ವಲಯದವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗ್ತಾರೆ. ಈ ವೇಳೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಲಿದ್ದಾರೆ.
ಇನ್ನು 21 ವರ್ಷಗಳಿಂದ ಮನೆಯವರೊಂದಿಗೆ ಸಂಪರ್ಕದಲ್ಲಿ ವಿಕ್ರಂಗೌಡ ಇರಲಿಲ್ಲ ಎಂಬ ಮಾಹಿತಿಯಿದೆ. ಆರಂಭದಲ್ಲಿ ಶವ ಪಡೆಯಲು ಕುಟುಂಬಸ್ಥರು ಹಿಂದೇಟು ಹಾಕಿದ್ದರು. ಪೊಲೀಸ್ ಇಲಾಖೆ ಮನವೊಲಿಸಿದ ಬಳಿಕ ವಿಕ್ರಂಗೌಡ ಶವ ಪಡೆಯಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 7 ದಿನ ಸಾಧಾರಣ ಮಳೆ ಸಾಧ್ಯತೆ..!