ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್ಗಳಲ್ಲಿ ನಟಿಸಿ ಮನೆ ಮಾತಾಗಿದ್ರು. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ. ಇದೀಗ ನಮ್ರತಾ ಗೌಡ ಫಸ್ಟ್ ಟೈಮ್ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ‘ಕಮಿಟ್ಮೆಂಟ್’ ಮತ್ತು ‘ಈವೆಂಟ್’ಗಳ ಮತ್ತೊಂದು ಮುಖವನ್ನು ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಸಂದಶರ್ನವೊಂದರಲ್ಲಿ ಮಾತನಾಡಿದ ನಮ್ರತಾ ಗೌಡ ಅವರು, ನಾನು ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವಳು. ನಾನು ಚಿತ್ರೀಕರಣಕ್ಕೆ ಹೋಗುವಾಗಲೂ ಅಪ್ಪ ಅಮ್ಮ ಜೊತೆ ಬರುತ್ತಿದ್ದರು. ಹಾಗಾಗಿ ಬಹಳ ಸುರಕ್ಷಿತ ವಾತಾವರಣದಲ್ಲಿ ಇದ್ದೆ. ಇತ್ತೀಚಿಗೆ ನಮ್ರತಾ ಕಮೀಟ್ಮೆಂಟ್ಗೆ ಬರ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೇರೆ ನಟಿಯರ ಹೆಸರು ಇದರಲ್ಲಿ ಇದೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಸ್ಟಿಂಗ್ ಡೈರೆಕ್ಟರ್ ಒಬ್ಬರು ಕಾಲ್ ಮಾಡಿ ಹೀಗೆ ಒಂದು ಕಡೆ ಹೋಗಬೇಕು ಎನ್ನುತ್ತಾರೆ ಆಗ ನನಗೆ ಏನೂ ಅರ್ಥವಾಗುತ್ತಿರಲಿಲ್ಲ ನನಗೆ ಹೀಗೆ ನಡೆಯುತ್ತಿದೆ ಅನ್ನೋ ಐಡಿಯಾ ಇರಲಿಲ್ಲ’ ಎಂದು ತಿಳಿಸಿದರು.
‘ಕಮಿಟ್ಮೆಂಟ್ ಎನ್ನುವುದಕ್ಕೆ ಈವೆಂಟ್ ಎನ್ನುವ ಕೋಡ್ ವರ್ಡ್ ಬಳಸುತ್ತಾರೆ. ಈವೆಂಟ್ಗೆ ಹೋಗ್ತೀರಾ ಎಂದು ಕೇಳಿದಾಗ ನನಗೆ ನಿಜಕ್ಕೂ ಶಾಕ್ ಆಯ್ತು. ಮಹಿಳೆಯೊಬ್ಬರು ಪೋನ್ ಮಾಡಿ ಈವೆಂಟ್ ಇದೆ ಆರ್ಆರ್ ನಗರದಲ್ಲಿ ಹೋಗ್ತೀರಾ ಎಂದು ಕೇಳಿದ್ದರು. ಏನು ಈವೆಂಟ್ ಎಂದು ಕೇಳಿದಾಗ ನಿಮಗೆ ಗೊತ್ತಿಲ್ವಾ ಅಂದ್ರು ಎಂದು ಹೇಳಿದರು.
ಕೊನೆಗೆ ನಾನು ಆಕೆಯ ಫೋನ್ ಕಾಲ್ ಕಟ್ ಮಾಡಿದ್ದೆ. ಬಳಿಕ ಒಂದಿಷ್ಟು ಸ್ಕ್ರೀನ್ ಶಾಟ್ ಬಂತು..ನಮ್ಮ ಫೋಟೋಗಳನ್ನು ಬಳಸಿ ಪ್ರೊಫೈಲ್ ಸಿದ್ಧಪಡಿಸುತ್ತಾರೆ ಅದಕ್ಕೆ ಒಂದು ರೇಟ್ ಫಿಕ್ಸ್ ಮಾಡುತ್ತಾರೆ. ಯಾರೋ ಕಸ್ಟಮರ್ಸ್ಗೆ ಕಳುಹಿಸುತ್ತಾರೆ ಬಳಿಕ ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಹೀಗೆ ಬ್ಯುಸಿನೆಸ್ ಮಾಡುತ್ತಾರೆ’ ಎಂದು ನಮತ್ರಾ ಹೇಳಿದ್ದಾರೆ.
ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡರೆ ನೀನು ಇರೋದೇ ಹೀಗೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರಿಗೆ ನಮ್ಮ ಬಗ್ಗೆ ಗೊತ್ತಿರುವುದಿಲ್ಲ. ನಾವು ಎಷ್ಟು ಕಷ್ಟ ಬಂದು ಮೇಲೆ ಬಂದಿರುತ್ತೇವೆ ಎಂದು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ನೀನು ಅಡ್ಡದಾರಿ ಹಿಡಿದಿದ್ದೀಯ, ಅದಕ್ಕೆ ಇಷ್ಟೆಲ್ಲಾ ಹಣ ಮಾಡಿರುವೆ ಎನ್ನುತ್ತಾರೆ. ಯಾರ ಬಳಿಯೋ ನನ್ನ ಸಮಸ್ಯೆ ಹೇಳಿಕೊಂಡು ಅವರು ಪರಿಹಾರ ಮಾಡುತ್ತಾರೆ ಅಂತ ಕೂರುವ ಬದಲಿಗೆ ಈ ವಿಚಾರದ ಬಗ್ಗೆ ನಾನೂ ಕಾನೂನು ಹೋರಾಟ ಮಾಡಬೇಕೆಂದುಕೊಂಡಿದ್ದೇನೆ. ನನಗೆ ನನ್ನ ತಂದೆ ತಾಯಿ ಬೆಂಬಲವಿದೆ ಎಂದು ನಮ್ರತಾ ತಿಳಿಸಿದ್ದಾರೆ.
ಇದನ್ನೂ ಓದಿ : ಬೇಲೆಕೇರಿ ಅದಿರು ನಾಪತ್ತೆ ಕೇಸ್ – ಸತೀಶ್ ಸೈಲ್ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು..!