Download Our App

Follow us

Home » ಮೆಟ್ರೋ » 6 ತಿಂಗಳಲ್ಲಿ ಬರೋಬ್ಬರಿ 32 ಲಕ್ಷ ದಂಡ ವಸೂಲಿ ಮಾಡಿದ ನಮ್ಮ ಮೆಟ್ರೋ..!

6 ತಿಂಗಳಲ್ಲಿ ಬರೋಬ್ಬರಿ 32 ಲಕ್ಷ ದಂಡ ವಸೂಲಿ ಮಾಡಿದ ನಮ್ಮ ಮೆಟ್ರೋ..!

ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ದುರ್ವರ್ತನೆ, ಅವಧಿ ಮೀರಿ ಪ್ರಯಾಣ ಸೇರಿದಂತೆ ಕಳೆದ ಆರು ತಿಂಗಳಲ್ಲಿ 32 ಲಕ್ಷ ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ನಮ್ಮ ಮೆಟ್ರೋ ವ್ಯಾಪ್ತಿಯ 66 ನಿಲ್ದಾಣಗಳಿಂದ ಆರು ತಿಂಗಳಲ್ಲಿ 10 ಲಕ್ಷ ಪ್ರಯಾಣಿಕರಿಂದ 32 ಲಕ್ಷ ರೂ. ದಂಡ ವಸೂಲಿ ಮಾಡಿದೆ.

ಪ್ರಯಾಣದ ಅವಧಿ ಮೀರಿದ ನಂತರ 20 ನಿಮಿಷಗಳೊಳಗೆ ನಿಲ್ದಾಣದಿಂದ ನಿರ್ಗಮಿಸಬೇಕು. ಅದಕ್ಕಿಂತ ಹೆಚ್ಚು ಅವಧಿ ಉಳಿದರೆ ಬಿಎಂಆರ್‌ಸಿಎಲ್‌ 50-100 ರೂ. ದಂಡ ವಿಧಿಸುತ್ತಿದೆ. ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗದಿರಲಿ ಹಾಗೂ ಸಹ ಪ್ರಯಾಣಿಕರಿಗೂ ಕಿರಿಕಿರಿಯಾಗಬಾರದು ಎಂಬ ಕಾರಣಕ್ಕೆ ಬೆಂಗಳೂರು ಮೆಟ್ರೋ (ಬಿಎಂಆರ್‌ಸಿಎಲ್‌) ಈ ಕ್ರಮ ಕೈಗೊಂಡಿದೆ.

ನಮ್ಮ ಮೆಟ್ರೋ ಪ್ರತಿ ತಿಂಗಳು ವಸೂಲಿ ಮಾಡಿದ ದಂಡಗಳೆಷ್ಟೂ?

  • ನವೆಂಬರ್ – 5, 55,667
  • ಡಿಸೆಂಬರ್ – 5,90,318
  • ಜನವರಿ – 5,45,791
  • ಫೆಬ್ರವರಿ – 5,25,717
  • ಮಾರ್ಚ್ – 5,01,398
  • ಎಪ್ರಿಲ್ – 5,29,610
  • ಒಟ್ಟು – 32,48,508

ಇದನ್ನೂ ಓದಿ : ಚಿತ್ರದುರ್ಗ : ಲಾರಿಗೆ ಹಿಂಬದಿಯಿಂದ ಟಾಟಾ ಎಸ್ ಡಿಕ್ಕಿ – ಇಬ್ಬರು ಸಾ*ವು..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here