ಮಂಡ್ಯ : ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಗಲಭೆ ಪ್ರಕರಣದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ನಾಗಮಂಗಲದಲ್ಲಿ ಇಂಥಾ ಘಟನೆ ಆಗಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಶುರುವಾಗಿ ಅಂತ್ಯವಾಗಿದೆ. ಸದ್ಯ ನಾಗಮಂಗಲ ಸ್ಥಿತಿ ಶಾಂತವಾಗಿದೆ ಎಂದು ಹೇಳಿದ್ದಾರೆ.
ಗಲಭೆಯಲ್ಲಿ ಯಾರಿಗೂ ಪ್ರಾಣ ಹಾನಿ, ಗಾಯಗಳಾಗಿಲ್ಲ, ಮೆರವಣಿಗೆ ಹೋಗುವಾಗ ಎರಡೂ ಕಡೆಯವರು ಕಲ್ಲು ಹೊಡೆದಿದ್ದಾರೆ. IGP, SP ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ADGP ಕಳಿಸಿ ಮಾಹಿತಿ ಪಡೆದಿದ್ದೇನೆ. ಅಗತ್ಯ ಬಿದ್ದರೆ ನಾನೂ ನಾಗಮಂಗಲಕ್ಕೆ ಹೋಗಿ ಅವಲೋಕಿಸುತ್ತೇನೆ ಎಂದಿದ್ದಾರೆ.
ಇನ್ನು ಮೇಲ್ನೋಟಕ್ಕೆ ರಾಜಕೀಯ ಪ್ರಚೋದನೆ ಅಂತ ಕಾಣ್ತಿಲ್ಲ, ಸ್ಥಳೀಯರು ಏನ್ ರಿಪೋರ್ಟ್ ಕೊಡ್ತಾರೋ ಗೊತ್ತಿಲ್ಲ, ಯಾರೂ ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು.. ಪೊಲೀಸರಿದ್ದಾರೆ, ಅವರನ್ನು ತನಿಖೆ ಮಾಡೋಕೆ ಬಿಡಿ ಎಂದು ನಾಗಮಂಗಲಕ್ಕೆ ಹೋಗ್ತಿರೋ ಬಿಜೆಪಿ, ಜೆಡಿಎಸ್ ನಾಯಕರಿಗೆ ಪರಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳ ಅಟ್ಟಹಾಸ ಮುಂದುವರೆದಿದೆ – ನಾಗಮಂಗಲ ಗಲಭೆಗೆ ಆರ್.ಅಶೋಕ್ ಖಂಡನೆ..!