ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ಸಿಗಲು ಇನ್ನೇನು ಕೆಲ ದಿನಗಳು ಬಾಕಿಯಿದೆ. ಈ ಮಧ್ಯೆ ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದೀಗ ಈ ಕೇಸ್ಗೆ ಸಂಬಂಧಿಸಿದಂತೆ ರೇವ್ ಪಾರ್ಟಿ ನಡೆಸಿದ್ದವರ ಮೇಲೆ ಮೈಸೂರಿನ ಇಲವಾಲ ಠಾಣೆಯಲ್ಲಿ FIR ದಾಖಲಾಗಿದೆ.
ಚೋಳೇನಹಳ್ಳಿ ಗ್ರಾಮದ ಶಂಕರ್ ಎಂಬುವವರ ಜಮೀನುನಲ್ಲಿ ಅರುಣ್, ವಿಷ್ಣು, ಭವಿಷ್ಯತ್, ಮದನ್, ಮಲ್ಲಿಕಾರ್ಜುನ, ಸಂತೋಷ್, ಸಾಗರ್, ಕರಣ್ ಎಂಬುವವರು ಯಾವುದೇ ಪರವಾನಗಿ ಇಲ್ಲದೆ ರೇವ್ ಪಾರ್ಟಿ ಆಯೋಜನೆ ಮಾಡಿದ್ದರು. ಪ್ರಖ್ಯಾತ ನಾಡಹಬ್ಬ ದಸರಾ ವೇಳೆಯೇ ನಶೆಯ ಆಟಾಟೋಪ ನಡೆಸಲಾಗುತ್ತಿತ್ತು.
ಇನ್ನು ಈ ಬಗ್ಗೆ ಖಚಿತ ಮಾಹಿತಿ ಪೆಡೆದ ಪೊಲೀಸರು, ತಡರಾತ್ರಿ ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಶಾ ಲೋಕದಲ್ಲಿ ತೇಲಾಡುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ನಾಯಕ್ ಮೇಲೆ ಹಲ್ಲೆ ನಡೆಸಲಾಗಿತ್ತು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾನೂನು ಕ್ರಮ ಜರುಗಿಸುವಂತೆ FIR ದಾಖಲಿಸಲಾಗಿದೆ. ಮೈಸೂರಿನ ಇಲವಾಲ ಠಾಣೆಯಲ್ಲಿ ಠಾಣಾ ಮೊ.ಸಂಖ್ಯೆ 210/2024 ಅಡಿ ಕಲಂ 221, 223,12(2) ಹಾಗೂ BNSS ಕಾಯ್ದೆ ಅಡಿ 15(a) 32,34,38(a)K.E. Act. ಅಡಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಇಂದಿನಿಂದ ಸಿಎಂ ಸಿದ್ದು ವಿರುದ್ದ ಲೋಕಾಯುಕ್ತದಲ್ಲಿ ತನಿಖೆ ಶುರು..!