Download Our App

Follow us

Home » ಅಪರಾಧ » ಬಗೆದಷ್ಟೂ ಬಯಲಾಗುತ್ತಿದೆ ಮುಡಾ ಕರ್ಮಕಾಂಡ – ಈ ಮೂವರೇ ಸೈಟ್​ ಅಕ್ರಮದ ಕಿಂಗ್​​ಪಿನ್​​ಗಳು..!

ಬಗೆದಷ್ಟೂ ಬಯಲಾಗುತ್ತಿದೆ ಮುಡಾ ಕರ್ಮಕಾಂಡ – ಈ ಮೂವರೇ ಸೈಟ್​ ಅಕ್ರಮದ ಕಿಂಗ್​​ಪಿನ್​​ಗಳು..!

ಮೈಸೂರು : ಮೈಸೂರು ಮುಡಾದ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ಮೂಡಾ ಕಮಿಷನರ್​​​​ ದಿನೇಶ್ ಕುಮಾರ್​ಗೆ ಸಾಥ್​​​​ ಕೊಟ್ಟವರ ಕೋಟಿ ಸೀಕ್ರೆಟ್ ಇದೀಗ​ ಹೊರಬಿದ್ದಿದೆ. ಉತ್ತಮ್ ಗೌಡ, ತ್ರಿಶೂಲ್, PA ಪ್ರಶಾಂತ್ ಸದಾ ಕಮಿಷನರ್​​​ ಆಫೀಸ್​ನಲ್ಲಿರ್ತಿದ್ದರು. ಈ ಮೂವರು ಕಮಿಷನರ್​ ಬೆನ್ನಿಗೆ ನಿಂತು 50-50 ಅನುಪಾತದಲ್ಲಿ ಸೈಟ್​ ಗಿಟ್ಟಿಸಿರೋ ಕಿಂಗ್​​ಪಿನ್​​ಗಳಾಗಿದ್ದಾರೆ. ಉತ್ತಮ್ ಗೌಡ ಹಾಗೂ ತ್ರಿಶೂಲ್ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದರು. ದಿನೇಶ್ ಕುಮಾರ್ ಭಾಮೈದುನ ತೇಜಸ್ ಗೌಡ ಅವರ ವ್ಯವಹಾರಕ್ಕೆ ಸಾಥ್ ಕೊಡ್ತಿದ್ದ.

ಮೂಡ ಕಮಿಷನರ್​ ಅಧಿಕೃತ ನಿವಾಸದಲ್ಲಿ ತೇಜಸ್​ಗೌಡ ಡೀಲ್​ ಮಾಡ್ತಿದ್ದ. ಇದೀಗ ತೇಜಸ್ ಗೌಡ ವಿರುದ್ಧ ಹಣಕಾಸು ವ್ಯವಹಾರದ ಹೊಣೆ ಹೊತ್ತು ಭಾವ‌ನಿಗೆ ಸಾಥ್ ಕೊಡ್ತಿದ್ದ ಆರೋಪ ಕೇಳಿಬಂದಿದೆ. ತೇಜಸ್ ಗೌಡ ಜತೆ ಉತ್ತಮ್ ಹಾಗೂ ತ್ರಿಶೂಲ್ ಕೂಡ ಸೇರಿಕೊಂಡಿದ್ದರು. ದಿನೇಶ್ ಕುಮಾರ್ ಪರಿಚಯಕ್ಕೂ ಮುನ್ನ ಇವರ ಬಳಿ ಏನೇನೂ ಇರಲಿಲ್ಲ. ನಂತರ ಈ ಟೀಮ್​​​ ಕೇವಲ 2 ವರ್ಷಗಳಲ್ಲೇ ಕೋಟಿ-ಕೋಟಿ ಸಂಪಾದಿಸಿದೆ.

ಖದೀಮರು 50-50 ಸೈಟ್​ ಶೋಧಿಸಿ ತಂದು ದಿನೇಶ್ ಕುಮಾರ್​​ಗೂ ರುಚಿ ಹತ್ತಿಸಿದ್ದಾರೆ. ಮೂಡಾಗೆ ಸ್ವಾಧೀನವಾಗದೆ ಭೂಮಿ ಕಳೆದುಕೊಂಡ ರೈತರನ್ನು ಈ ಟೀಂ ಪತ್ತೆ ಮಾಡ್ತಿತ್ತು. ನಂತರ ಇಂಥಾ ರೈತರಿಗೆ ಆಸೆ ಹುಟ್ಟಿಸಿ GPA ಮೂಲಕ ಭೂಮಿ‌ ಪರಭಾರೆ ಮಾಡಿಸೋ ವ್ಯವಹಾರ ಮಾಡುತ್ತಿದ್ದರು. ರೈತರ ಹೆಸರಲ್ಲೇ ಅರ್ಜಿ ಹಾಕಿ ಅಲ್ಪಸ್ವಲ್ಪ ಕೊಟ್ಟು ಪೂರಾ ಹಣವನ್ನು ಖದೀಮರು ದೋಚ್ತಿದ್ದರು. ದಿನೇಶ್ ಕುಮಾರ್ ಬಳಿ ಏನೇ‌ ಕೆಲಸ ಆಗಬೇಕಿದ್ರೂ ಈ ಟೀಂ ಭೇಟಿ ಮಾಡ್ಬೇಕಿತ್ತು. ರಾತ್ರೋರಾತ್ರಿ ಡೀಲ್ ಮಾಡ್ತಿದ್ದ ಟೀಂಗೆ ಆಪ್ತ ಸಹಾಯಕ‌ ಪ್ರಶಾಂತ್ ಸಾಥ್​​ ನೀಡುತ್ತಿದ್ದ. ದಿನೇಶ್ ಕುಮಾರ್ ಅವಧಿಯ ಭ್ರಷ್ಟಾಚಾರದಲ್ಲಿ ಫಲಾನುಭವಿಗಳ ಲಿಸ್ಟ್​ ದೊಡ್ಡದಿದೆ.

ಇದನ್ನೂ ಓದಿ : ಅರುಣ್​ ಕಟಾರೆಯಿಂದ ಸ್ಯಾಂಡಲ್​ವುಡ್​ನ ಟೆಕ್ನಿಷನ್​ಗೆ ಸಂಕಷ್ಟ- ಡಮ್ಮಿ ಗನ್​ ಕೊಟ್ಟಿದ್ದ ಸಾಹಿಲ್​​​ಗೆ ನೋಟಿಸ್ ಜಾರಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here