Download Our App

Follow us

Home » ಜಿಲ್ಲೆ » ಮುಡಾ ಹಗರಣ : ED ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಮೈಸೂರು ಪಾಲಿಕೆ ನೌಕರ ವಜಾ..!

ಮುಡಾ ಹಗರಣ : ED ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಮೈಸೂರು ಪಾಲಿಕೆ ನೌಕರ ವಜಾ..!

ಮೈಸೂರು : ಮುಡಾ ಪ್ರಕರಣ ಸಂಬಂಧ ED ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಬಿ.ಕೆ.​​​ ಕುಮಾರ್​​ನನ್ನು ಕೆಲಸದಿಂದ​​ ವಜಾ ಮಾಡಲಾಗಿದೆ. ಮೈಸೂರು ಪಾಲಿಕೆ ನೌಕರನಾಗಿದ್ದ ಬಿ.ಕೆ ಕುಮಾರ್ ದ್ವಿತೀಯ ದರ್ಜೆ ಸಹಾಯಕನಾಗಿದ್ದ.

ಬಿ.ಕೆ ಕುಮಾರ್ ಮುಡಾದಿಂದ ದಾಖಲೆ ತಂದುಕೊಟ್ಟು ಸೈಟ್​ ಅಕ್ರಮಕ್ಕೆ ಸಾಥ್​​ ನೀಡಿದ್ದಾನೆ. ಮುಡಾ ಮತ್ತು ಪಾಲಿಕೆ ಎರಡರಲ್ಲೂ ಕೆಲಸ ಮಾಡ್ತಿದ್ದ ಕುಮಾರ್​​ನ್ನು ED ವಿಚಾರಣೆ ಬೆನ್ನಲ್ಲೇ ಕಮಿಷನರ್ ವಜಾ ಮಾಡಿದ್ದಾರೆ. ಮೂಲತಃ ಪಾಂಡವಪುರ ತಾಲೂಕು ಬೇವಿನಕುಪ್ಪೆಯವನಾಗಿರುವ ಕುಮಾರ್ ಮುಡಾದಲ್ಲಿ 2004ರಿಂದ​​ ಹೊರಗುತ್ತಿಗೆ ನೌಕರನಾಗಿ ಕೆಲಸ ​ಮಾಡುತ್ತಿದ್ದ. ಸದ್ಯ ಮೈಸೂರಿನ ವಿಜಯನಗರದ 2ನೇ ಹಂತದಲ್ಲಿ ವಾಸವಾಗಿದ್ದಾನೆ.

ಅಲ್ಪಕಾಲದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದ ಕುಮಾರ್​​​ 2020ರಿಂದೀಚೆಗೆ ಮುಡಾ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಗುಮಾಸ್ತನಾಗಿದ್ದಾನೆ. ಈ ವೇಳೆ ಇಬ್ಬರು ಕಮಿಷನರ್‌ಗಳಿಗೆ ಶೇ.50:50ರಡಿ ಸೈಟ್​ಗಳ ಪಟ್ಟಿ ಒದಗಿಸಿದ್ದ. ಪ್ರಭಾವಿ ಜನಪ್ರತಿನಿಧಿಗಳು, ಮಧ್ಯವರ್ತಿಗಳಿಗೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಸೈಟ್​ ನೀಡಿದ್ದು, ಕೋಟ್ಯಾಂತರ ಬೆಲೆ ಬಾಳುವ ಸೈಟ್​ ಮಂಜೂರು ಮಾಡಿಸಿದ್ದ ಆರೋಪ ಬಿ.ಕೆ.​​​ ಕುಮಾರ್​​ ಮೇಲಿದೆ.

ಬಿ.ಕೆ.​​​ ಕುಮಾರ್ 8000 ಖಾಲಿ ಸೈಟ್​ಗಳ ಪಟ್ಟಿಯಲ್ಲಿದ್ದ ಸೈಟ್​ ಕಂಡಕಂಡವರಿಗೆ ಹಂಚಲು ಸಹಕಾರ ಮಾಡಿದ್ದಾನೆ. ಮುಡಾ ಕಚೇರಿಯ ಎಲ್ಲಾ ವಿಭಾಗದಲ್ಲಿ ಬಿ.ಕೆ.ಕುಮಾರ್​​ನದ್ದೇ ಪಾರುಪತ್ಯವಿದ್ದು, ಬೇಕಾದ ದಾಖಲೆ ಕ್ಷಣಾರ್ಧದಲ್ಲೇ ಕುಮಾರ್​​​ ಕೈಯಲ್ಲಿರುತ್ತಿತ್ತು. ಬಿ.ಕೆ.​​​ ಕುಮಾರ್ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಪಾಲಿಕೆ ಕಮಿಷನರ್ ಸೂಚನೆ ನೀಡಿದ್ದು, ಐದು ದಿನದ ಹಿಂದೆಯೇ ಬಿ.ಕೆ ಕುಮಾರ್​​ನ್ನು ಇಡಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ : ‘ರಿದಂ’ಗೆ ರಾಯರ ಆಶೀರ್ವಾದ – ಮಂತ್ರಾಲಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ಬಿ.ವೈ.ವಿಜಯೇಂದ್ರಗೆ ಸಡ್ಡುಹೊಡೆದ ಭಿನ್ನರು – ಪ್ರತ್ಯೇಕ ವಕ್ಫ್​​ ಹೋರಾಟಕ್ಕೆ ಸಜ್ಜಾದ ಯತ್ನಾಳ್​​ ಟೀಂ..!

ಬೆಂಗಳೂರು : ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ ​ನೋಟಿಸ್​ ನೀಡಿದೆ. ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ದ ನ.​​ 25 ರಿಂದ ಡಿ.​ 25ರವರೆಗೆ

Live Cricket

Add Your Heading Text Here