ಮೈಸೂರು : ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಕಹಿ ಘಟನೆ ಮಾಸುವ ಮುನ್ನವೇ ಮೈಸೂರಿನ ನಂಜನಗೂಡಿನಲ್ಲಿ ಕಿಡಿಗೇಡಿಯೊಬ್ಬ ಹರಕೆ ಗೂಳಿ ಬಾಲ ಕತ್ತರಿಸಿದ್ದಾನೆ.
ನಂಜನಗೂಡು ಶ್ರೀನಂಜುಂಡೇಶ್ವರನಿಗೆ ಬಿಟ್ಟಿದ್ದ ಹರಕೆ ಗೂಳಿ ಮೇಲೆ ದುಷ್ಕರ್ಮಿ ಮಾರಕಾಸ್ತ್ರದಿಂದ ದಾಳಿ ಮಾಡಿ, ಗೂಳಿಯ ಬಾಲ ಕಟ್ ಮಾಡಿದ್ದಾನೆ. ಈ ಘಟನೆ ನಂಜನಗೂಡು ನಗರದ ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯದ ಸಮೀಪದಲ್ಲೇ ಇರುವ ಹಳ್ಳದಕೇರಿ ಬಡಾವಣೆಯ ಬಳಿ ನಡೆದಿದೆ.
ರಸ್ತೆಯಲ್ಲಿ ಓಡಾಡಿಕೊಂಡು ನಿಂತಿದ್ದ ಹರಕೆ ಗೂಳಿಯ ಬಾಲವನ್ನು ಮಚ್ಚಿನಿಂದ ಕೊಚ್ಚಿದ್ದು, ಇದರಿಂದ ಗೂಳಿ ರಕ್ತದ ಮಡುವಿನಲ್ಲಿ ನರಳಾಡುತ್ತಿತ್ತು. ಗೋಳೂರು ಸ್ನೇಕ್ ಬಸವರಾಜು, ದೇವರಸನಹಳ್ಳಿ ರಾಮಕೃಷ್ಣ, ಪೈಲ್ವಾನ್ ಆದಿ, ಪಶು ವೈದ್ಯರು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ತುಮಕೂರು : ತೆಂಗಿನಕಾಯಿ ಫ್ಯಾಕ್ಟರಿ ನೀರಿನ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು..!
Post Views: 143