ಬೆಂಗಳೂರು : ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರೋದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಾಸಿಕ್ಯೂಷನ್ ಸಂಕಷ್ಟ ಎದುರಿಸುತ್ತಿದ್ದು, ಇದೀಗ ಬಿಜೆಪಿ ನಾಯಕರಿಗೂ ಪ್ರಾಸಿಕ್ಯೂಷನ್ ಕಂಟಕ ಶುರುವಾಗುವ ಸಾಧ್ಯತೆಯಿದೆ.
ಮಾಜಿ ಮಂತ್ರಿ ಮುರುಗೇಶ್ ನಿರಾಣಿ ಮೇಲೆ KIADB ಹಗರಣದ ಆರೋಪ ಕೇಳಿಬಂದಿದೆ. ಸಚಿವ ಎಂಬಿ ಪಾಟೀಲ್ ಬಿಜೆಪಿ ನಾಯಕರ ಹಗರಣದ ಫೈಲ್ ಬಿಚ್ಚಿಟ್ಟಿದ್ದಾರೆ. 2008ರಲ್ಲಿ ಸಚಿವರಾಗಿದ್ದಾಗ ತಮ್ಮದೇ ಸಂಸ್ಥೆಗೆ 25 ಎಕ್ರೆ ಪಡೆದಿದ್ದಾರೆ, ಆಗ್ರೋಟೆಕ್ ಪಾರ್ಕ್ನಲ್ಲಿ ತೇಜಸ್ ಇಂಟರ್ನ್ಯಾಷನಲ್ ಸಂಸ್ಥೆಗೆ ಜಮೀನು ಪಡೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಹಾಗಾಗಿ ಕೈಗಾರಿಕಾ ಪ್ರದೇಶದಲ್ಲಿ ನಿರಾಣಿ ಸಚಿವರಾಗಿ CA ನಿವೇಶನ ಹೇಗೆ ಪಡೆದ್ರು? ಅನ್ನೊ ಪ್ರಶ್ನೆ ಎದುರಾಗಿದೆ.
ಮಂಡ್ಯದ ಬೂಕನಕೆರೆ ಬಳಿ ನಿರಾಣಿ 113 ಎಕ್ರೆ ಜಮೀನು ಪಡೆದಿದ್ದಾರೆ. ಬೇರೆಯವರಿಗೆ ಅಲಾಟ್ ಆಗಿದ್ದನ್ನು ಕ್ಯಾನ್ಸಲ್ ಮಾಡಿ ಪಡೆದುಕೊಂಡು ಆ ಭೂಮಿಯಲ್ಲಿ ಸ್ಕೂಲ್ ನಡೆಸ್ತಿದ್ದಾರೆ ಎಂಬ ಆರೋಪವಿದೆ.
ಈ ಬಗ್ಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿ, ಚಾಣಕ್ಯ ವಿವಿಗೆ 116 ಎಕ್ರೆ ಜಮೀನಿಗೆ 187 ಕೋಟಿ ರಿಲ್ಯಾಕ್ಸೇಷನ್ ಹೇಗೆ ಕೊಟ್ರಿ? ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಚಾಣಕ್ಯ ವಿವಿಗೆ ಜಮೀನು ಯಾಕೆ ? ಚಾಣಕ್ಯ ವಿವಿ ಹಗರಣದಲ್ಲಿ ಸರ್ಕಾರಕ್ಕೆ 137 ಕೋಟಿ ಲಾಸ್ ಆಗಿದೆ. ಚಾಣಕ್ಯ ವಿವಿ, ರಾಷ್ಟ್ರೋತ್ಥಾನ ಪರಿಷತ್ ಜಮೀನು ವಾಪಸ್ ಪಡೀತೇವೆ, ಜಮೀನಿನ ಉದ್ದೇಶ ದುರ್ಬಳಕೆಯಾಗಿದ್ದರೆ ವಾಪಸ್ ಪಡೀತೇವೆ. ನಿರಾಣಿ ಸಹಿತ ಎಲ್ಲರ ವಿರುದ್ಧ ಪ್ರಾಸಿಕ್ಯೂಷನ್ ಕೋರುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ‘ಸರ್ವೇ ನಂಬರ್ 45’ ಚಿತ್ರಕ್ಕೆ ಬಂಡೆ ಮಹಾಕಾಳಿ ಅಮ್ಮನ ಸನ್ನಿಧಿಯಲ್ಲಿ ಚಾಲನೆ..!