ಚಿತ್ರದುರ್ಗ : ಮುರುಘಾ ಶ್ರೀ ಬೆಳ್ಳಿ ಮೂರ್ತಿ ನಾಪತ್ತೆ ಕೇಸ್ ದಾಖಲಾಗುತ್ತಿದ್ದಂತೆ ಮಠದ ಆವರಣದಲ್ಲೇ ಮೂರ್ತಿ ಪತ್ತೆಯಾಗಿದೆ. ಕಳ್ಳರು ಗೋಣಿ ಚೀಲದಲ್ಲಿ ತಂದು ಮೂರ್ತಿ ಇಟ್ಟು ಹೋಗಿದ್ದಾರೆ.
22KG ತೂಕದ 15 ಲಕ್ಷ ಮೌಲ್ಯದ ಬೆಳ್ಳಿ ಮೂರ್ತಿ ಇದಾಗಿದೆ. ಮುರುಘಾ ಶರಣ ಗುರು ವಂದನಾ ಕಾರ್ಯಕ್ರಮದಲ್ಲಿ ಉಡುಗೊರೆಯಾಗಿ ನೀಡಿದ್ದರು. ಚಿತ್ರದುರ್ಗ ನಗರದ ಮುರುಘಾ ಮಠದ ಆವರಣದ ಬಳಿಯೇ ಮೂರ್ತಿ ಪತ್ತೆಯಾಗಿದೆ.
ಮಠದ ಆವರಣದಲ್ಲಿರುವ ಕನ್ನಡ ಮಾಧ್ಯಮ ಶಾಲೆಯ ಬಳಿ ಇಟ್ಟು ಹೋಗಿದ್ದಾರೆ. ನಾಪತ್ತೆ ಪ್ರಕರಣ ಸಂಬಂಧ ಬಸವ ಕುಮಾರ ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭ ಮಾಡುತ್ತಿದ್ದಂತೆ ಬೆಳ್ಳಿ ಮೂರ್ತಿಯನ್ನು ತಂದಿಟ್ಟು ಹೋಗಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ವ್ಯಾಪಕ ಮಳೆಗೆ ಶಾಲಾ ಗೋಡೆ ಕುಸಿತ – ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!
Post Views: 313