ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಸೇರಿ ಬಂಧಿತ 17 ಆರೋಪಿಗಳ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು. ಈ ಹಿನ್ನಲೆ ಪೊಲೀಸರು ಆರೋಪಿಗಳನ್ನು 24ನೇ ACMM ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಈಗಾಗಲೇ ಈ ಕೊಲೆ ಕೇಸ್ ಸಂಬಂಧ ಎ1 ಪವಿತ್ರಾ ಗೌಡ ಜೈಲು ಪಾಲಾಗಿದ್ದಾರೆ.
ನಂತರ A2 ಆರೋಪಿ ದರ್ಶನ್ ಸೇರಿ 4 ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು. ಇದೀಗ ವಾದ- ಪ್ರತಿವಾದ ಅಲಿಸಿದ ನ್ಯಾಯಧೀಶರು ದರ್ಶನ್ ,ಧನರಾಜ್, ವಿನಯ್ ಹಾಗೂ ಪ್ರದೋಶ್ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಕೋರ್ಟ್ನತ್ತ ‘ಡಿ’ ಗ್ಯಾಂಗ್ - ಕೋರ್ಟ್ಗೆ ಪೊಲೀಸರಿಂದ ಟೈಟ್ ಸೆಕ್ಯೂರಿಟಿ..!
Post Views: 131