ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಹನಿಟ್ರ್ಯಾಪ್ ಕೇಸ್ ಈ ಹಿಂದೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಜಾತಿ ನಿಂದನೆ ಕೇಸ್ನಲ್ಲಿ ಮುನಿರತ್ನ ಅರೆಸ್ಟ್ ಆದ ಬಳಿಕ ಅವರ ವಿರುದ್ಧ ಒಂದಾದ ನಂತರ ಒಂದು ಕೇಸ್ ಬೀಳುತ್ತಿತ್ತು. ಇದರ ಜೊತೆಗೆ ಮುನಿರತ್ನ ಬಿಜೆಪಿ ನಾಯಕರನ್ನ ಟಾರ್ಗೆಟ್ ಕೂಡ ಮಾಡಿದ್ರು ಎಂಬ ಆರೋಪ ಕೇಳಿಬಂದಿತ್ತು.
ಬಿಜೆಪಿ ಶಾಸಕ ಮುನಿರತ್ನ ತಮ್ಮದೇ ಪಕ್ಷದ ನಾಯಕ ಆರ್. ಅಶೋಕ್ಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಯತ್ನಿಸಿದ್ದರು. ಅಂದು ಆರ್. ಅಶೋಕ್ಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಪ್ಯಾನ್ ಮಾಡಿದ್ದ ಮುನಿರತ್ನ ಜೊತೆ ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಎಸ್ಐಟಿ ಪೊಲೀಸರು ವಿಪಕ್ಷ ನಾಯಕ ಆರ್. ಅಶೋಕ್ ರವರಿಗೆ ಶಾಸಕ ಮುನಿರತ್ನ ಏಡ್ಸ್ ಇಂಜೆಕ್ಷನ್ ಚುಚ್ಚಲು ಯತ್ನಿಸಿದರು ಎಂದು ಅರೆಸ್ಟ್ ಮಾಡಿ ಚಾರ್ಜ್ ಶೀಟ್ ಹಾಕಿದ್ದರು. ಇಂದು ಅದೇ ಮುನಿರತ್ನ ಅವರ ಜೊತೆ ಆರ್ ಅಶೋಕ್ ಖುಷಿ ಖುಷಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಟಾಸ್ಕ್ – ಗೆದ್ದೋರು ಯಾರು?