Download Our App

Follow us

Home » ಅಪರಾಧ » ಮುನಿರತ್ನ ಹನಿ ಗ್ಯಾಂಗ್​​ನ ರಿಂಗ್​​​ ಮಾಸ್ಟರ್ ಇವನೇ – FIRನಲ್ಲಿ ಗನ್​ಮ್ಯಾನ್ ವಿಜಯ್​​ಕುಮಾರ್​ ಕಾಮಕಾಂಡ ಬಯಲು..!

ಮುನಿರತ್ನ ಹನಿ ಗ್ಯಾಂಗ್​​ನ ರಿಂಗ್​​​ ಮಾಸ್ಟರ್ ಇವನೇ – FIRನಲ್ಲಿ ಗನ್​ಮ್ಯಾನ್ ವಿಜಯ್​​ಕುಮಾರ್​ ಕಾಮಕಾಂಡ ಬಯಲು..!

ಬೆಂಗಳೂರು : ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್​ನಲ್ಲಿ ಮುನಿರತ್ನಗೆ  ಕೋರ್ಟ್​ ಜಾಮೀನು ನೀಡಿತ್ತು. ಆದರೆ ನಿನ್ನೆ ರಾತ್ರಿಯೇ ಅತ್ಯಾಚಾರ ಕೇಸ್​ನಲ್ಲಿ ಬಿಜೆಪಿ ಶಾಸಕ ಮುನಿರತ್ನರನ್ನು ಕಗ್ಗಲೀಪುರ ಪೊಲೀಸರು ಮತ್ತೆ ಅರೆಸ್ಟ್​​ ಮಾಡಿದ್ದಾರೆ. ಇಂದು ರೇಪ್​ ಕೇಸ್ ಆರೋಪಿ ಮುನಿರತ್ನಗೆ ಮೆಡಿಕಲ್​ ಟೆಸ್ಟ್​ ಮಾಡಿದ ಬಳಿಕ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇದೀಗ FIRನಲ್ಲಿ ಮುನಿರತ್ನ ಹನಿ ಗ್ಯಾಂಗ್​​ನ ಸತ್ಯ ಬಟಾ ಬಯಲಾಗಿದೆ.

ಮುನಿರತ್ನ ಗನ್​ಮ್ಯಾನ್ ವಿಜಯಕುಮಾರೇ ಹನಿ ಗ್ಯಾಂಗ್​​ನ ರಿಂಗ್​​​ ಮಾಸ್ಟರ್. ಈತ ಆಂಟಿಯರನ್ನು ಖೆಡ್ಡಾಕ್ಕೆ ಕೆಡವುತಿದ್ದ, ಆಂಟಿಯರನ್ನು ಬೆದರಿಸಿ ಮುನಿರತ್ನ ಬಳಿ ಕಳಿಸ್ತಿದ್ದ ಎಂದು FIRನಲ್ಲಿ A-2 ಆಗಿರುವ ವಿಜಯ್​​ಕುಮಾರ್​ ಕಾಮಕಾಂಡ ಬಯಲಾಗಿದೆ. ವಿಜಯಕುಮಾರ್​​ ಮುನಿರತ್ನಗೆ ಮಹಿಳೆಯರನ್ನು ಲಿಂಕ್​ ಮಾಡಿಸುತ್ತಿದ್ದ, ರೂಂಗೆ ಕರೆದೊಯ್ಯೋ ಜವಾಬ್ದಾರಿ ಕೂಡ ವಿಜಯಕುಮಾರ್​​ನದ್ದೇ ಆಗಿತ್ತು.

ವಿಜಯಕುಮಾರ್​​​ ಹನಿಟ್ರ್ಯಾಪ್​ ಮಾಡಲು ವಿಡಿಯೋ ಮಾಡಿಸ್ತಿದ್ದ, ಯಾರನ್ನು ಟ್ರ್ಯಾಪ್​​ ಮಾಡ್ಬೇಕು ಎಂದು ಮಾರ್ಕ್​ ಮಾಡ್ತಿದ್ದ. ಅದರಂತೆ ಹುಡುಗರನ್ನು ಬಿಟ್ಟು ಸ್ಟಿಂಗ್ ಕ್ಯಾಮೆರಾ ಫಿಕ್ಸ್ ಮಾಡಿಸುತ್ತಿದ್ದ. ಹನಿ ಟ್ರ್ಯಾಪ್​ ಲೀಲೆ ವೇಳೆ ಮುನಿರತ್ನ ಲೈವ್​​ ನೋಡ್ತಿದ್ದ. ವಿಜಯಕುಮಾರ್ ರೆಸಾರ್ಟ್​, ಲಾಡ್ಜ್​​, ಹೋಂ ಸ್ಟೇಗಳನ್ನು ವ್ಯವಸ್ಥೆ ಮಾಡಿ ಮುನಿರತ್ನಗೆ ಲೈವ್​​ ವ್ಯವಸ್ಥೆ ಮಾಡಿಕೊಡ್ತಿದ್ದ. ಸಮಸ್ಯೆ ಆದಾಗ ವಿಜಯಕುಮಾರ್​​ ಪೊಲೀಸ್ ಎಸ್ಕಾರ್ಟ್​ ವ್ಯವಸ್ಥೆಯನ್ನೂ ಮಾಡ್ತಿದ್ದ. ಇದೀಗ ವಿಜಯಕುಮಾರ್​​​ ಕಾಮಕಾಂಡದ ಬಗ್ಗೆ ಸಂತ್ರಸ್ತೆ ಎಳೆ-ಎಳೆಯಾಗಿ ಬಿಚ್ಚಿಟ್ಟಿರೋದು FIRನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ : ‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್ ಮೋಷನ್​ ಪೋಸ್ಟರ್ ರಿಲೀಸ್ -​ ಚಿತ್ರತಂಡಕ್ಕೆ ದುನಿಯಾ ವಿಜಯ್ ಸಾಥ್..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್​ಗಾಗಿ ಕಾಯ್ತಿದ್ದವರಿಗೆ ಶಾಕಿಂಗ್ ನ್ಯೂಸ್.. ಈ ಸಲ ಯಾಕೆ ಹೀಗ್ಮಾಡಿದ್ರು ಎಂದ ಫ್ಯಾನ್ಸ್..!

ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ, ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ.‌ ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದ್ದು, ಬಿಗ್‌ ಬಾಸ್‌

Live Cricket

Add Your Heading Text Here