ಬೆಂಗಳೂರು : ಇದೇ ತಿಂಗಳ 21ರಂದು ವೈಯಾಲಿಕಾವಲ್ನ ಪೈಪ್ ಲೈನ್ ರಸ್ತೆಯ ಮನೆಯೊಂದರ ಫ್ರಿಡ್ಜ್ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬಾಕೆಯ ದೇಹವನ್ನು ಪೀಸ್-ಪೀಸ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಇಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ವೈಯಾಲಿಕಾವಲ್ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದರು.
ನರಹಂತಕ ಯಾವುದೇ ಮೂಲೆಯಲ್ಲಿದ್ರೂ ಆತನನ್ನು ಬಂಧಿಸಲು ಪೊಲೀಸರು ಹೊರ ರಾಜ್ಯಕ್ಕೆ ಹೊಗಿದ್ದರು. ಆದ್ರೆ ಆತ ಪೊಲೀಸರ ಕೈಗೆ ಸಿಕ್ಕಿದ್ದು ಮಾತ್ರ ಶವವಾಗಿ. ಈತನೇ ಮಹಾಲಕ್ಷ್ಮೀಯನ್ನ ಕೊಚ್ಚಿ ಕೊಲೆ ಮಾಡಿರೋದು ಇದೀಗ ರಿವೀಲ್ ಆಗಿದೆ. ಹೌದು.. ಮಹಾಲಕ್ಷ್ಮಿ ದೇಹ ಪೀಸ್-ಪೀಸ್ ಮಾಡಿದ್ದ ರಾಕ್ಷಸ ಸೂಸೈಡ್ ಮಾಡಿಕೊಂಡಿದ್ದಾನೆ. ಆರೋಪಿ ಮುಕ್ತಿ ರಂಜನ್ ಸ್ಮಶಾನದಲ್ಲೇ ಹೆಣವಾಗಿದ್ದು, ಒಡಿಶಾದ ಭುನಿಪುರ್ ಸ್ಮಶಾನದಲ್ಲಿ ರಂಜನ್ ನೇಣಿಗೆ ಶರಣಾಗಿದ್ದಾನೆ.
ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ಮುಕ್ತಿ ರಂಜನ್ ಒಡಿಶಾಗೆ ಎಸ್ಕೇಪ್ ಆಗಿದ್ದ. ಒಡಿಶಾದ ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್, ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡ್ತಿದ್ದ. ನಿನ್ನೆ ರಾತ್ರಿ ಭದ್ರಕ್ಗೆ ತೆರಳುತ್ತಿದ್ದೇನೆ ಅಂತ ಮನೆಯಲ್ಲಿ ಹೇಳಿ ಸ್ಕೂಟಿ ಮೂಲಕ ನಿರ್ಜನ ಪ್ರದೇಶಕ್ಕೆ ತರಳಿದ್ದ. ಮೊಬೈಲ್ ಇಲ್ಲದ ಕಾರಣ ಈತ ಲ್ಯಾಪ್ಟಾಪ್ ಒಯ್ದಿದ್ದ. ಸ್ಕೂಟಿಯಲ್ಲಿ ಲ್ಯಾಪ್ಟಾಪ್ ಇಟ್ಟು ಭುನಿಪುರ್ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದಾನೆ.
ಈ ಸಂಬಧ ಭದ್ರಕ್ ಜಿಲ್ಲೆಯ ಧುಸುರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧುಸುರಿ ಠಾಣೆ ಪೊಲೀಸರು ಸ್ಕೂಟಿ, ಲ್ಯಾಪ್ಟಾಪ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಬಳಿಕ ಲ್ಯಾಪ್ಟಾಟ್ನಲ್ಲಿ ಕೆಲ ವಿಡಿಯೋಸ್, ಫೋಟೋಸ್ ಪತ್ತೆಯಾಗಿದ್ದು, ಮಹಾಲಕ್ಷ್ಮಿಯ ಕೊಲೆ ಬಳಿಕ ಪೊಲೀಸರ ವಿಚಾರಣೆಗೆ ಭಯಪಟ್ಟು ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮುಕ್ತಿ ರಂಜನ್ ರಾಯ್ ಯಾರು? ಮಹಾಲಕ್ಷ್ಮಿ ಕೆಲಸ ಮಾಡ್ತಿದ್ದ ಮಲ್ಲೇಶ್ವರಂ ಫ್ಯಾಶನ್ ಫ್ಯಾಕ್ಟರಿಯ ಟೀಮ್ ಹೆಡ್ ಆಗಿದ್ದ. ತಮ್ಮನ ಜೊತೆಯಲ್ಲಿ ಹೆಬ್ಬಗೋಡಿಯಲ್ಲಿ ವಾಸವಾಗಿದ್ದ. ಇದೇ ವೇಳೆ ಸಹೋದ್ಯೋಗಿ ಮಹಾಲಕ್ಷ್ಮಿ ಜೊತೆ ಪ್ರೀತಿಯಾಗಿದೆ. ಸೆಪ್ಟೆಂಬರ್ 1ರಂದು ಎಥಾಪ್ರಕಾರ ಮಹಾಲಕ್ಷ್ಮಿ ಮತ್ತು ಮುಕ್ತಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ರು. ಆದ್ರೆ, ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿ ವೀಕ್ ಆಫ್ ತೆಗೆದುಕೊಂಡಿದ್ಲು. ಅವತ್ತು ನೆಲಮಂಗಲದ ತಾಯಿ ಮನೆಗೆ ಬರೋದಾಗಿ ಹೇಳಿದ್ಲಂತೆ. ಆದ್ರೆ, ಅಂದು ಮಹಾಲಕ್ಷ್ಮಿ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದೇ ಮುಕ್ತಿ ರಾಯ್ ಮಹಾಲಕ್ಷ್ಮಿಯನ್ನ ಕೊಂದು ಪರಾರಿಯಾಗಿದ್ದ. ಮಹಾಲಕ್ಷ್ಮಿ ಬೇರೊಬ್ಬನ ಜತೆ ಆತ್ಮೀಯವಾಗಿದ್ದಳಂತೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಪದೇ ಪದೆ ಜಗಳ ಆಗ್ತಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿರೋ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ವ್ಯೂಹ – ಇಂದೇ ದಾಖಲಾಗುತ್ತಾ FIR?