ನಟ ಶಿವರಾಜ್ ಕೆ ಆರ್ ಪೇಟೆ ನಟಿಸಲಿರುವ ಹೊಸ ಚಿತ್ರದ ಮುಹೂರ್ತ ನಿನ್ನೆ ಸರಳವಾಗಿ ನೆರವೇರಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರ ತಂಡ ಸರಳವಾಗಿ ಪೂಜೆ ಸಲ್ಲಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಉತ್ಸಾಹಿ ಯುವ ತಂಡದ ಈ ಪ್ರಯತ್ನಕ್ಕೆ ಶ್ರೇಯ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಲಿದ್ದು, ನಿರ್ಮಾಣದ ಜವಬ್ದಾರಿ ಹೊತ್ತಿದೆ. ತಾಂತ್ರಿಕ ವರ್ಗ ಹಾಗೂ ಕಲಾವಿದರ ಪಟ್ಟಿಯನ್ನ ಇನ್ನೂ ಬಿಟ್ಟುಕೊಡದ ಚಿತ್ರತಂಡ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ತಿಳಿಸಿದೆ.
ಚಿತ್ರಿಕರಣಕ್ಕಾಗಿ ಮಳೆಗಾಲವನ್ನ ಕಾಯುತ್ತಿದ್ದ ಚಿತ್ರತಂಡ ಮುಂದಿನ ವಾರದಿಂದ ಚಿತ್ರಿಕರಣ ಆರಂಭಿಸಲಿದ್ದು, ಕನ್ನಡಿಗರ ಹಾಗೂ ಚಿತ್ರ ರಸಿಕರ ಆಶೀರ್ವಾದವನ್ನ ಬಯಸುತ್ತಿದೆ.
ಇದನ್ನೂ ಓದಿ : ಪೆನ್ಡ್ರೈವ್ ಹಂಚಿಕೆ ಪ್ರಕರಣ : ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಅರೆಸ್ಟ್..!
Post Views: 121