ಬೆಂಗಳೂರು : ಮುಡಾ ಚಕ್ರವ್ಯೂಹದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಟೆನ್ಷನ್ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯಗೆ ಪಾಲಿಗೆ ಹೈಕೋರ್ಟ್ ಅಮಂಗಳಕರ ಸುದ್ದಿ ಮೂಲಕ ಶಾಕ್ ಕೊಟ್ಟಿದೆ. ಇವತ್ತು ಕೂಡ ಸಿದ್ದರಾಮಯ್ಯಗೆ ತುಂಬಾ ಮಹತ್ವದ ದಿನವಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಇಂದು ಮುಡಾ ಕೇಸ್‌ನ ಆದೇಶ ಬರುವ ಸಾಧ್ಯತೆ ಇದೆ.
ಇನ್ನು ಹೈಕೋರ್ಟ್ ಆದೇಶದಿಂದ ಸಿಎಂ ಸಿದ್ದರಾಮಯ್ಯ ತಲೆಕಡೆಸಿಕೊಂಡಿಲ್ಲ. ತಮ್ಮ ಹಳೆ ಡೈಲಾಗ್ ಅನ್ನೇ ಪುನರುಚ್ಚರಿಸಿರುವ ಅವರು, ನಾನ್ಯಾಕೆ ರಾಜೀನಾಮೆ ಕೊಡಲಿ ಎಂದಿದ್ದಾರೆ. ಈ ಮಧ್ಯೆ ಇವತ್ತು ಸಿಎಂ ಪೂರ್ವ ನಿಗದಿಯಂತೆ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ನಡೆಯಲಿರುವ ಆರ್ಯಾಧನ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2.30ಕ್ಕೆ HALನಿಂದ ವಿಶೇಷ ವಿಮಾನದಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲರನ್ನು ಭೇಟಿಯಾಗಿಲಿದ್ದಾರೆ ಎನ್ನಲಾಗಿದೆ. ಭೇಟಿ ಸಂದರ್ಭದಲ್ಲಿ ಹೈಕೋರ್ಟ್ ನೀಡಿರೋ ತೀರ್ಪು ಬಗ್ಗೆ, ತಮ್ಮ ಮುಂದಿನ ನಡೆ, ನಿರ್ಧಾರದ ಬಗ್ಗೆ ವೇಣುಗೋಪಾಲ್ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಬಳಿಕ ಸಿಎಂ ಸಿದ್ದು ಇಂದು ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ : ಸಿಎಂ ಸಿದ್ದುಗೆ ಸಾಲು ಸಾಲು ಸಂಕಷ್ಟ.. ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿಂದು ವಿಚಾರಣೆ..!