ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ಇಡಿ (ED) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ರೇಡ್ ಮಾಡಿ, ಅಕ್ರಮವಾಗಿ ಸೈಟ್ ಪಡೆದವರಿಗೆ ಬಿಗ್ ಶಾಕ್ ಕೊಟ್ಟಿತ್ತು. 33 ಗಂಟೆಯಿಂದ ಮೈಸೂರು ಮುಡಾದ ಮಾಜಿ ಆಯುಕ್ತರಾಗಿರೋ ನಟೇಶ್ ಮನೆಯನ್ನು ED ಪರಿಶೀಲನೆ ನಡೆಸಿದೆ. ಆದರೆ ನಟೇಶ್ ವಿಚಾರಣೆಗೆ ಸಹಕರಿಸದ ಹಿನ್ನೆಲೆ ED ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಮುಡಾ ಕೇಸ್ನಲ್ಲಿ ನಟೇಶ್ ಅವರನ್ನು ವಶಕ್ಕೆ ಪಡೆದು ಶಾಂತಿನಗರದ ಇ.ಡಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಯಶ್ ವಿರುದ್ಧ ಎಫ್ಐಆರ್ಗೆ ಅರಣ್ಯ ಸಚಿವ ಸೂಚನೆ – ಅರೆಸ್ಟ್ ಆಗ್ತಾರಾ ಕೆಜಿಎಫ್ ಸ್ಟಾರ್?
Post Views: 43