ಮೈಸೂರು : ಮುಡಾ ಪ್ರಕರಣದಲ್ಲಿ ED ತನಿಖೆ ದಿನದಿಂದ ದಿನಕ್ಕೆ ಚುರುಕಾಗುತ್ತಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರ 7 ಜನ ಆಪ್ತರಿಗೆ ED ನೋಟಿಸ್ ಜಾರಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಆಪ್ತರಾದ ಮಾಜಿ ಅಧ್ಯಕ್ಷ ಮರೀಗೌಡ, ಬಿಲ್ಡರ್ ಮಂಜುನಾಥ್, ಸಿಎಂ ಪರಮಾಪ್ತ ರಾಕೇಶ್ ಪಾಪಣ್ಣ, ಮಾಜಿ ಆಯುಕ್ತರಾದ ದಿನೇಶ್, ನಟೇಶ್, ಜಯರಾಂ, ಶಿವಣ್ಣ ಸೇರಿ 7 ಮಂದಿಗೆ ED ಸಮನ್ಸ್ ಜಾರಿ ಮಾಡಿದೆ.
ಕೆಲ ದಿನಗಳ ಹಿಂದೆ 25 ಲಕ್ಷ ರೂ. ಹಣ ಎಣಿಸುವ ವಿಡಿಯೋ ವೈರಲ್ ಆಗಿತ್ತು, ಈ ಬಗ್ಗೆ ಬಿಟಿವಿ ಸುದ್ದಿ ಕೂಡ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಮರು ದಿನವೇ ಇಡಿ ಅಧಿಕಾರಿಗಳು ಮಂಜುನಾಥ್, ರಾಕೇಶ್ ಪಾಪಣ್ಣ, ಜಯರಾಂ, ನಟೇಶ್ ಮನೆ ಮೇಲೆ ದಾಳಿ ಮಾಡಿದ್ದರು. ಇದೀಗ 25 ಲಕ್ಷ ರೂ. ಹಣ ನೀಡಿದ್ದ ಶಿವಣ್ಣಗೂ ED ನೋಟಿಸ್ ಜಾರಿ ಮಾಡಿ, ತುರ್ತು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಮುಡಾ ಮಾಜಿ ಆಯುಕ್ತರಾದ ನಟೇಶ್ ಹಾಗೂ ದಿನೇಶ್ ಕುಮಾರ್ ನಿವಾಸದ ಮೇಲೂ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಆಪ್ತರಿಗೆ ED ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕುಡುಕ ಡಾಕ್ಟರ್, ವಾರ್ಡ್ ಬಾಯ್ ಅವಾಂತರ – ಆಗಿದ್ದೇನು?