ಎಪಿ ಅರ್ಜುನ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇದೇ ಅಕ್ಟೋಬರ್25 ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಮಾರ್ಟಿನ್ ಚಿತ್ರಕ್ಕೆ ಸಂಗೀತದ ಕೆಲಸವು ಭರದಿಂದ ಸಾಗುತ್ತಿದೆ. ಇದೀಗ ಈ ಸಿನಿಮಾದ ರೊಮ್ಯಾಂಟಿಕ್ ಹಾಡೊಂದಕ್ಕೆ ಖ್ಯಾತ ಗಾಯಕ ಸೋನು ನಿಗಮ್ ದನಿಯಾಗಿದ್ದಾರೆ. ನಿರ್ದೇಶಕ ಎಪಿ ಅರ್ಜುನ್ ನಿರ್ದೇಶನದ ಜೊತೆ ಜೊತೆಗೆ ಈ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಇದು ಪಕ್ಕ ಸುಮಧುರ ಸಂಗೀತ ಇರೋ ಹಾಡಾಗಿದ್ದು, ಕೇಳಲು ಕಿವಿಗೆ ಇಂಪೆರೆಯಲಿದೆ.
ಮಾರ್ಟಿನ್ ಬಗ್ಗೆ ಈಗಾಗಲೇ ಧ್ರುವ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಕೊಂಡಿದ್ದು, ಕನ್ನಡಿಗರಷ್ಟೇ ಅಲ್ಲದೆ ಪರಭಾಷಿಗರು ಸಹ ಮಾರ್ಟಿನ್ ಬರುವಿಕೆಗೆ ಕಾಯ್ತಾ ಇದ್ದಾರೆ. ಮಾರ್ಟಿನ್ ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಮಣಿ ಶರ್ಮಾ ಹಾಡುಗಳನ್ನ ಕಂಪೋಜ್ ಮಾಡಿದ್ದಾರೆ. ಇದೀಗ ಈ ಹಾಡುಗಳಲ್ಲಿಯೇ ಸೋನು ನಿಗಮ್ ಹಾಡಿನ ರೆಕಾರ್ಡಿಂಗ್ ಆಗಿದೆ. ಆದರೆ, ಎಷ್ಟು ಹಾಡುಗಳನ್ನ ಹಾಡಿದ್ದಾರೆ. ಯಾವೆಲ್ಲ ಹಾಡುಗಳನ್ನ ಹಾಡಿದ್ದಾರೆ ಅನ್ನೋ ಮಾಹಿತಿ ಇಲ್ಲ.
ಸೋನು ನಿಗಮ್ ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಮತ್ತು ನಿರ್ಮಾಪಕ ಉದಯ್ ಮೆಹ್ತಾ ಕೂಡ ಹಾಜರಿದ್ದರು. ನಾಯಕಿ ನಟಿ ವೈಭವಿ ಶಾಂಡಿಲ್ಯ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಸಾಂಗ್ ರೆಕಾರ್ಡಿಂಗ್ ಸಮಯದ ಫೋಟೋ ಹಂಚಿಕೊಂಡಿದ್ದಾರೆ. ಸೋನು ನಿಗಮ್ ಸಾಂಗ್ ರೆಕಾರ್ಡಿಂಗ್ ಅನುಭವ ಸೂಪರ್ ಅಂತಲೂ ಬರೆದುಕೊಂಡಿದ್ದಾರೆ. ಸೋನು ನಿಗಮ್ ಜೊತೆಗೆ ಮಾತನಾಡ್ತಿರೋ ಫೋಟೋಗಳನ್ನು ವೈಭವಿ ಶೇರ್ ಮಾಡಿದ್ದಾರೆ.
ಈಗಾಗಲೇ ಮಾರ್ಟಿನ್ ಸಿನಿಮಾದ ಬಹುತೇಕ ಕೆಲಸ ಮುಗಿದಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಸಿನಿಮಾ ರಿಲೀಸ್ಗೆ ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಖೋ-ಖೋ ಫೀಲ್ಡ್ನಲ್ಲೇ ಡ್ರ್ಯಾಗರ್ ಹಿಡಿದು ಅಟ್ಟಹಾಸ ಮೆರೆದ ಪುಂಡರ ಗ್ಯಾಂಗ್ – FIR ದಾಖಲು..!