‘ನಿಮಗೊಂದು ಸಿಹಿ ಸುದ್ದಿ’ ಈ ವರ್ಷದ ಅಚ್ಚರಿ ಮತ್ತು ವಿಶೇಷ ಸಿನಿಮಾ. ಬಿಡುಗಡೆಗೆ ಸಿದ್ದವಿರೋ ಈ ಚಿತ್ರದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಯುವಕನೊಬ್ಬ ಗರ್ಭಧರಿಸಿ ಜಗತ್ತಿನಲ್ಲಿ ಅದ್ಭುತ ಅಚ್ಚರಿ ಹುಟ್ಟಿಸೋ ವಿಚಾರದ ಸುತ್ತಾ ಹೆಣೆದಿರೋ ಚಿತ್ರ ಇದಾಗಿದೆ. ಚಿತ್ರರಂಗದಲ್ಲಿ ಒಂದಷ್ಟು ಅನುಭವ ಹೊಂದಿ, ಈ ಮೂಲಕ ಸ್ವತಂತ್ರ ಸಿನಿಮಾ ಮಾಡಿದ್ದಾರೆ ನಟ ನಿರ್ದೇಶಕ ಬರಹಗಾರ ಬಹುಮುಖ ಪ್ರತಿಭೆ ರಘು ಭಟ್.
ಅವ್ಯಕ್ತ ಸಿನಿಮಾಸ್ ಸಂಸ್ಥೆಯ ಹರೀಶ್ ಎನ್ ಗೌಡರವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೂಕ್ಷ್ಮ ಹಾಗೂ ವಿಶಿಷ್ಟ ಕಥಾಹಂದರವನ್ನ ಹೊಂದಿರೋ ಈ ಚಿತ್ರದಲ್ಲಿ ರಘು ಭಟ್ಗೆ ಜೊತೆಯಾಗಿ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್ ಮತ್ತು ಪ್ರಜ್ವಲ್ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ. ಆನಂದ್ ಸುಂದ್ರೇಶ್ ಅವರ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತ, ನವೀನ್ ತೇಜ್ ಮತ್ತು ರಘುನಾಥ್ ಎಲ್ ರವರ ಸಂಕಲನ ಚಿತ್ರಕ್ಕಿದೆ. ತಾಂತ್ರಿಕವಾಗಿ ಹಾಗೂ ಕಥಾ ವಸ್ತು ವಿಚಾರವಾಗಿ ಭರವಸೆ ಮೂಡಿಸುತ್ತಿರೋ ನಿಮಗೊಂದು ಸಿಹಿ ಸುದ್ದಿ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡ ಚಿತ್ರತಂಡ : ‘ನಿಮಗೊಂದು ಸಿಹಿ ಸುದ್ದಿ’ ಒಂದು ವಿಭಿನ್ನವಾದ ಅಂತಹ ಪ್ರಯತ್ನ ಇಂತಹ ಕಂಟೆಂಟ್ ಬಗ್ಗೆ ನನಗೆ ಹೆಮ್ಮೆ ಇದೆ ಮೋಷನ್ ಪೋಸ್ಟರ್ ಲಾಂಚ್ ಮೂಲಕ ನಿಮಗೆಲ್ಲಾ ಸಿಹಿ ಸುದ್ದಿಯನ್ನು ಕೊಟ್ಟಿದ್ದೀವಿ ಮುಂದಿನ ದಿನಗಳಲ್ಲಿ ನನಗೆ ಸೀಮಂತ ಡೆಲಿವರಿ ಎಲ್ಲವೂ ಆಗುತ್ತೆ, ಅನ್ನೋದರ ಮೂಲಕ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಿದಂತಹ ರಘು ಭಟ್ ಹೇಳಿದ್ದಾರೆ.
ಮಹಾಭಾರತ ನನ್ನ ಕಥೆಗೆ ಸ್ಪೂರ್ತಿ ಅದರಲ್ಲಿ ಆ ಕೃಷ್ಣ ಅರ್ಜುನರ ವಿಚಾರ ಅರ್ಜುನ ಬ್ರಾಹ್ಮಣ್ಯ ಆಗಿ ಒಂದಷ್ಟು ಜರ್ನಿ ಮಾಡಿದ್ದು ನನ್ನ ಕಣ್ಮುಂದೆ ಬಂತು, ಪ್ರಪಂಚದಾದ್ಯಂತ ಮಾಡಿದ ರಿಸರ್ಚ್ ಗಳಲ್ಲಿ ಗಂಡು ಗರ್ಭಿಣಿಯಾದಂತಹ ಘಟನೆ ನಡೆದಿವೆ, ಚಿತ್ರದಲ್ಲಿ ನನ್ನ ಹೆಸರು ಅರ್ಜುನ್, ಅರ್ಜುನ್ ಪಾತ್ರಧಾರಿ ಗರ್ಭಿಣಿಯಾಗುತ್ತಾನೆ, ಹೇಗಾಗುತ್ತಾನೆ ಅನ್ನೋದೇ ಚಿತ್ರದ ಟ್ವಿಸ್ಟ್. ಇಂಥದ್ದೊಂದು Core ಐಡಿಯಾ ಮೂಲಕ, ಮನೋರಂಜನೇಯ ಅಂಶಗಳನ್ನು ಇಟ್ಟುಕೊಂಡು ಮಾಡಿದ ಚಿತ್ರವೇ ನಿಮಗೊಂದು ಸಿಹಿಸುದ್ದಿ.
ತಮಿಳುನಾಡು ವಿಕ್ರಂ ಸೂರ್ಯ ತರಹದ ನಟರು ಈ ತರಹದ ವಿಭಿನ್ನ ಪ್ರಯತ್ನವನ್ನು ಮಾಡಿ ಸಿನಿಮಾಗಳನ್ನು ಮಾಡುತ್ತಾರೆ ನಾನು ಸಹ ಅದೇ ತರಹದ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡ್ತಾ ಇದೀನಿ ರೈತರಾಗಿ ಬಹಳಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಇರುವ ನನಗೆ ಇದರ ನಂತರ, ನಾನೇ ನಾಯಕ ನಟನಾಗಿ ನಟಿಸುತ್ತಿರುವ ಮತ್ತೊಂದು ಸಿನಿಮಾ ನಡಿತಾ ಇದೆ, ನಿಮಗೊಂದು ಸಿಹಿ ಸುದ್ದಿ ಸಿನಿಮಾ ರಿಲೀಸ್ ಆದ ನಂತರ ಮುಂದಿನ ಅಪ್ಡೇಟ್ ಕೊಡ್ತೀನಿ ಎಂದರು.
ನಿರ್ಮಾಪಕರು ಹರೀಶ್ ಗೌಡ ಮಾತನಾಡಿ, ನಾನು ಮೂಲತಹ ನೆಲಮಂಗಲದವನು ಇದು ನನ್ನ ಮೊದಲ ಪ್ರಯತ್ನ ನಾನು ಅಪ್ಪಟ ಕನ್ನಡ ಸಿನಿಮಾಗಳ ಅಭಿಮಾನಿ ಅದರಲ್ಲೂ ಡಾ. ಪುನೀತ್ ರಾಜಕುಮಾರ್ ಅವರು ಅಂದ್ರೆ ನಂಗೆ ಪ್ರಾಣ. ಗಂಡಸೊಬ್ಬ ಗರ್ಭಿಣಿ ಆಗುತ್ತಾನೆ ಅನ್ನೋದೇ ತುಂಬಾ ಇಂಟರೆಸ್ಟಿಂಗ್ ಆದಂತಹ ವಿಷಯ ಹೀಗಾಗಿ ಈ ಕಥೆ ನನಗೆ ಇಷ್ಟ ಆಯ್ತು. ಇಂಥದೊಂದು ಪ್ರಯತ್ನ ಮಾಡಿರುವಂತಹ ಚಿತ್ರದ ನಿರ್ಮಾಪಕನಾಗಿರೋದು ಖುಷಿ ತಂದಿದೆ ಹೆಮ್ಮೆ ತಂದಿದೆ ಮಹಾಶಿವರಾತ್ರಿಗೆ ನಿಮಗೆಲ್ಲ ಸಿಹಿಸುದ್ದಿ ಕೊಡ್ತೀವಿ ಎಂದರು.
ನಿಮಗೊಂದು ಸಿಹಿ ಸುದ್ದಿ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದು ನನಗೆ ಖುಷಿ ಕೊಟ್ಟಿದೆ ಎಂದು ಮಾತನಾಡಿದ ಪ್ರಮೋದ್ ಮರವಂತೆ, ಸಿಹಿಸುದ್ದಿಗೆ ಮತ್ತು ಸಿಹಿಗೆ ಸಾಕಷ್ಟು ವ್ಯತ್ಯಾಸ ಇದೆ. ಸಿಹಿ ಇದ್ರೆ ಬಹಳ ಖುಷಿ, ಸಿಹಿ ಜಾಸ್ತಿ ಆದರೆ ಬಿಪಿ ಶುಗರ್ ಬರುತ್ತೆ. ಸ್ಯಾಂಡಲ್ ವುಡ್ ನಲ್ಲಿ ಸಿಹಿ ಸುದ್ದಿಗಳು ಜಾಸ್ತಿ ಆಗಬೇಕು ಜಾಸ್ತಿ ಸಿಗಬೇಕು ಅದು ಸಕ್ಸಸ್ ಸಿಹಿ ಸುದ್ದಿ ಆಗಬೇಕು. ‘ನಿಮಗೊಂದು ಸಿಹಿಸುದ್ದಿ’ ಚಿತ್ರಕ್ಕೆ ಕಥೆ ಬರೆದಂತಹ ರಘು ಭಟ್ ಮೂಲತಃ ಒಬ್ಬ ರೈಟರ್ ಆಗಿರುವುದರಿಂದ ಅವರಿಗೆ ಬರವಣಿಗೆಯ ಮೇಲೆ ಸಕ್ಕತ್ತು ಗ್ರಿಪ್ ಇದೆ. ಸ್ವತಃ ರೈಟರ್ ಆಕ್ಟರ್ ಹಾಗೂ ಡೈರೆಕ್ಟರ್ ಆಗಿರುವ ಕಾರಣ ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಆಗುತ್ತೆ. ರಘು ಭಟ್ಟವರ ಬರವಣಿಗೆಯನ್ನು ನೋಡಿದಾಗ ಅವರ ಮಾತನ್ನು ಕೇಳಿದಾಗ ಅವರಲ್ಲಿರುವಂತಹ ಒಬ್ಬ ಪ್ರತಿಭಾವಂತ ವ್ಯಕ್ತಿ ಕಾಣುತ್ತಾನೆ. ‘ನಿಮಗೊಂದು ಸಿಹಿಸುದ್ದಿ’ ಚಿತ್ರದಲ್ಲಿ ರಘು ಭಟ್ ಜೊತೆಗಿನ ಕಾವ್ಯ ಶೆಟ್ಟಿ ಕಾಂಬಿನೇಷನ್ ವರ್ಕೌಟ್ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶಾಸಕರಿಗೆ ಸಂಕ್ರಾಂತಿ ಗಿಫ್ಟ್ : ತಲಾ 10 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ಧರಾಮಯ್ಯ..!