ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದೀಗ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬೆನ್ನಲ್ಲೇ ಡಿ ಗ್ಯಾಂಗ್ ವಿಕೃತಿಗೆ ಮತ್ತಷ್ಟು ಸಾಕ್ಷಿ ಲಭ್ಯವಾಗಿದೆ.
ಡಿ ಗ್ಯಾಂಗ್ ರೇಣುಕಾಸ್ವಾಮಿಯನ್ನು ಹತ್ಯೆ ಮಾಡುವುದಕ್ಕೂ ಮುನ್ನ ರಾಕ್ಷಸರ ರೀತಿ ಚಿತ್ರಹಿಂಸೆ ಕೊಟ್ಟಿದ್ದರು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ವರದಿಯಾಗಿತ್ತು. ಡಿ ಗ್ಯಾಂಗ್ ಚಿತ್ರಹಿಂಸೆಗೆ ರೇಣುಕಾ ಅವರ ತಲೆ ಭಾಗಕ್ಕೆ ಒಳಗಿನಿಂದ ಗಂಭೀರವಾಗಿ ಪೆಟ್ಟು ಬಿದ್ದಿರುವುದು ರಿಪೋರ್ಟ್ನಲ್ಲಿ ವರದಿಯಾಗಿತ್ತು. ತಲೆ ಭಾಗದಲ್ಲಿ ರಕ್ತ ಸೋರಿಕೆ ಆಗಿಲ್ಲ. ಆದರೆ, ಯಾವುದೋ ವಸ್ತುವಿನಿಂದ ಅಪ್ಪಳಿಸಿರುವುದು ತಿಳಿದು ಬಂದಿತ್ತು.
ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎರಡು ಲಾರಿಗಳು ಪ್ರಮುಖ ಸಾಕ್ಷಿಗಳಾಗಿವೆ. ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಹೋಗಿ ಲಾರಿಗಳಿಂದ ಡಿಕ್ಕಿ ಹೊಡೆಸಿ ಹಲ್ಲೆ ನಡೆಸಲಾಗಿದೆ. ಅಕ್ಕ-ಪಕ್ಕ ನಿಂತಿದ್ದ ಲಾರಿಗಳಿಗೆ ಹಿಗ್ಗಾಮುಗ್ಗಾ ಬಡಿದಿದ್ದ ಪರಿಣಾಮ ರೇಣುಕಾಸ್ವಾಮಿಗೆ ತಲೆಗೆ ಗಂಭೀರವಾಗಿ ಗಾಯವಾಗಲು ಇದೆ ಕಾರಣ ಎಂಬುದು ತಿಳಿದು ಬಂದಿದೆ.
ಹೀಗಾಗಿಯೇ ಇವುಗಳ ದಾಖಲೆಗಳನ್ನು ಸಂಗ್ರಹಿಸಿ ಸಾಕ್ಷಿ ಮಾಡಿದ ಪೊಲೀಸರು ಎರಡು ಲಾರಿಗಳ ಮಾಲೀಕರ ಪತ್ತೆಗಾಗಿ RTOಗೆ ಪತ್ರ ಬರೆದಿದ್ದಾರೆ. ಮೂಲ ಮಾಲೀಕರ ಜೊತೆಗೆ ವಾಹನಗಳ ದಾಖಲೆಗೆ ಪೊಲೀಸರು ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ ಉಪಚುನಾವಣೆ : ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದ ಟಿಕೆಟ್ ಫೈಟ್..!