ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕೃತಗೊಳಿಸಿದೆ. ಈ ಮೂಲಕ ಭಾರತಕ್ಕೆ ಮಹಾಮಾರಿ ಎಂಟ್ರಿ ಕೊಟ್ಟ ಆತಂಕ ಶುರುವಾಗಿದೆ. ಈಗಾಗಲೇ 29 ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ಈ ಮಂಕಿಪಾಕ್ಸ್ ಈಗ ಭಾರತಕ್ಕೂ ಕಾಲಿಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹೇಳುವ ಪ್ರಕಾರ ಇತ್ತೀಚೆಗೆ ಆಫ್ರಿಕಾದ ದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದ ಕೂಡಲೇ ಅವರನ್ನು ಐಸೊಲೇಟ್ ಮಾಡಿ ಸೋಂಕು ಹೆಚ್ಚಿನವರಿಗೆ ಹರಡದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಈಗಾಗಲೇ ಅವರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದ್ದು, ಪರೀಕ್ಷೆಯಲ್ಲಿ ಮಂಕಿಪಾಕ್ಸ್ ವೈರಸ್ ಇರುವುದು ಕಂಡು ಬಂದಿದೆ.
ಮಂಕಿಪಾಕ್ಸ್ಗೆ ಒಳಗಾಗಿರುವ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇರಿಸಲಾಗಿde. ಇನ್ನು ಮಂಕಿಪಾಕ್ಸ್ ತಡೆಗೆ ಮುಂಜಾಗ್ರತೆ ವಹಿಸಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಪ್ರತ್ಯೇಕವಾಗಿರಿಸಲು ಐಸೋಲೆಷನ್ ವ್ಯವಸ್ಥೆ ಮಾಡಬೇಕು, ತರಬೇತಿ ಪಡೆದ ನುರಿತ ವೈದ್ಯರು ಹಾಗೂ ಔಷಧಿಗಳ ವ್ಯವಸ್ಥೆ ಕಲ್ಪಿಸಬೇಕು. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬೇಕಾದ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕು ಹಾಗೂ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಅದರ ಜೊತೆಗೆ ಇದೊಂದು ಕೇವಲ ಐಸೋಲೆಟೆಡ್ ಮಾಡುವಂತಹ ಸಾಮಾನ್ಯ ಪ್ರಕರಣ. ಇದೇ ಮಾದರಿಯ ಒಟ್ಟು 30 ಪ್ರಕರಣಗಳು ಭಾರತದಲ್ಲಿ ಈ ಹಿಂದೆ 2022ರಲ್ಲಿ ವರದಿಯಾಗಿದ್ದವು. ಈಗ ಪತ್ತೆಯಾಗಿರುವ ಮಂಕಿಪಾಕ್ಸ್ ವೈರಸ್ ಪ್ರಕರಣ ಯಾವುದೇ ಪಬ್ಲಿಕ್ ಹೆಲ್ತ್ ಏಮರ್ಜೆನ್ಸಿಯ ಭಾಗವಲ್ಲ. ಹೀಗಾಗಿ ಯಾರೂ ವಿಚಲಿತರಾಗುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ : ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ – ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ ವೈರಲ್..!