Download Our App

Follow us

Home » ಸಿನಿಮಾ » ಫೆಬ್ರವರಿಯಲ್ಲಿ ವಿಭಿನ್ನ ಕಥಾಹಂದರದ “ಮಾಂಕ್ ದಿ ಯಂಗ್”ತೆರೆಗೆ – ಸಂಕ್ರಾಂತಿಗೆ ಸಿನಿಮಾದ ಪ್ರಚಾರ ಶುರು!

ಫೆಬ್ರವರಿಯಲ್ಲಿ ವಿಭಿನ್ನ ಕಥಾಹಂದರದ “ಮಾಂಕ್ ದಿ ಯಂಗ್”ತೆರೆಗೆ – ಸಂಕ್ರಾಂತಿಗೆ ಸಿನಿಮಾದ ಪ್ರಚಾರ ಶುರು!

ಬೆಂಗಳೂರು : ಸ್ಯಾಂಡಲ್​ವುಡ್​​ನಲ್ಲಿ ಹೊಸ ತಂಡ ಸೇರಿ ನಿರ್ಮಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಸಿನಿಮಾ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. “ಮಾಂಕ್ ದಿ ಯಂಗ್” ಸಿನಿಮಾವನ್ನು ಫೆಬ್ರವರಿ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಸದ್ಯದಲ್ಲೇ ಬರುವ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ “ಮಾಂಕ್ ದಿ ಯಂಗ್” ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಲಿದೆ.

ಈ ಸಂದರ್ಭದಲ್ಲಿ ಚಿತ್ರದ ಗ್ಲಿಂಪ್ಸ್, ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ. ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಖ್ಯಾತ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಸ್ವಾಮಿನಾಥನ್ ರಾಮಕೃಷ್ಣ ಹಾಗೂ ಸುಪ್ರೀತ್ ಫಾಲ್ಗುಣ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಾಗೂ ಟೀಸರ್ ಮೂಲಕ “ಮಾಂಕ್ ದಿ ಯಂಗ್” ಜನರ ಮನಸ್ಸಿಗೆ ಹತ್ತಿರವಾಗಿದೆ.

ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದಾರೆ. ಸರೋವರ್ ಅವರು ನಾಯಕ ನಟನಾಗಿ ನಟಿಸಿದ್ದು ಸೌಂದರ್ಯ ಗೌಡ ಅವರು ಈ ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳಿನ ಪ್ರಸಿದ್ದ ನಟ ಬಬ್ಲೂ ಪೃಥ್ವಿರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಉಷಾ ಭಂಡಾರಿ, ಪ್ರಣಯ ಮೂರ್ತಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ನಿವೃತ್ತ ಆರ್ಮಿ ಆಫೀಸರ್ ಕರ್ನಲ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಗೋಪಿಚಂದ್, ಲಾಲ್ ಚಂದ್ ಖತಾರ್ ಮತ್ತು ಸರೋವರ್ ಐದು ಜನ ಸೇರಿ “ಮಾಂಕ್ ದಿ ಯಂಗ್” ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಪಕರೆಲ್ಲಾ ಈ ಚಿತ್ರದಲ್ಲಿ ನಟನೆಯನ್ನೂ ಮಾಡಿರುವುದು ಸಿನಿಮಾದ ವಿಶೇಷ.

ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಕ್ಲೈಮಾಕ್ಸ್ ಛಾಯಾಗ್ರಹಣ ದೀಪಕ್ ಹಾಗೂ ಧನುಷ್ ಬೆದ್ರೆ ಅವರ ಸಂಕಲನ ಹರ್ಷವರ್ಧನ್ ಏ.ಎಲ್ ಅವರ ನೃತ್ಯ ನಿರ್ದೇಶನ “ಮಾಂಕ್ ದಿ ಯಂಗ್” ಚಿತ್ರಕ್ಕಿದೆ.

ಇದನ್ನೂ ಓದಿ : ಅಲ್ಲು ಅರ್ಜುನ್​ಗೆ ಬಿಗ್​ ರಿಲೀಫ್ – ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸಲ್ಲಿ ರೆಗ್ಯುಲರ್ ಬೇಲ್!

Leave a Comment

DG Ad

RELATED LATEST NEWS

Top Headlines

ಕನ್ನಡದ ಹಿರಿಯ ಸಾಹಿತಿ ಡಾ. ನಾ ಡಿಸೋಜ ವಿಧಿವಶ..!

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ನಾ ಡಿಸೋಜ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ

Live Cricket

Add Your Heading Text Here