ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರು ಜಾತಿನಿಂದನೆ ಹಾಗೂ ವಂಚನೆ ಆರೋಪದ ಪ್ರಕರಣದಲ್ಲಿ ಜಾಮಿನು ಪಡೆದುಕೊಂಡಿದ್ದರು. ಆದ್ರೆ ಅದಾದ ಬಳಿಕ ಅವರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿದ ಪೊಲೀಸರು ಅವರನ್ನು ಜೈಲಿನಲ್ಲಿರುವಾಗಲೇ ವಶಕ್ಕೆ ಪಡೆದಿದ್ದರು. ಸದ್ಯ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಕೇಸ್ನ್ನು ಎಸ್‌ಐಟಿಗೆ ವಹಿಸಿದ ಹಿನ್ನೆಲೆ ಮುನಿರತ್ನ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ SIT ತಂಡ ವಶಕ್ಕೆ ಪಡೆದುಕೊಂಡಿದೆ.
MLA ಮುನಿರತ್ನಗೆ ಬ್ಯಾಕ್ ಟು ಬ್ಯಾಕ್ ಕಂಟಕ ಎದುರಾಗುತ್ತಲೇ ಇದ್ದು, ಹನಿಟ್ರ್ಯಾಪ್, ಏಡ್ಸ್ ಟ್ರ್ಯಾಪ್ ಬಳಿಕ ಇದೀಗ ಮನಿಟ್ರ್ಯಾಪ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಬಿಎಂಪಿ ಆಡಳಿತ ಬೆದರಿಸಿ 500 ಕೋಟಿ ಹಣ ಬಿಡುಗಡೆ ಮಾಡಿ, ಕಾಮಗಾರಿ ನಡೆಸದೆ 500 ಕೋಟಿ ಜೇಬಿಗಿಳಿಸಿದ ಆರೋಪ ಕೇಳಿಬಂದಿದೆ. ಮುನಿರತ್ನ ಅರೆಸ್ಟ್ ನಂತರ ಮನಿದೋಖಾ ಬಯಲಾಗ್ತಿದೆ. ಈ ಬಗ್ಗೆ BBMPಗೆ ಗುತ್ತಿಗೆದಾರರಿಂದಲೇ ಮಾಹಿತಿ ಬಂದಿದೆ.
ಮಾಹಿತಿ ಕ್ರೋಢೀಕರಿಸಿ ತನಿಖೆಗೆ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಉನ್ನತ ಮಟ್ಟದ ತನಿಖೆಗೆ ಸಮಿತಿ ರಚನೆ ಮಾಡಿ ಆದೇಶ ನೀಡಿದ್ದು, ಹಿರಿಯ IAS ಅಧಿಕಾರಿ ಮನಿಷ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. BBMP ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ RR ನಗರದಲ್ಲಿ ಮಂಜೂರಾದ ಕಾಮಗಾರಿಗಳ ಫೈಲ್ ತರಿಸಿಕೊಂಡಿದ್ದಾರೆ. ತನಿಖೆ ನಡೆಸಿ ಮನೀಷ್ ಮೌದ್ಗಿಲ್ ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ತನಿಖೆಯಲ್ಲಿ ಅಕ್ರಮ ಸಾಬೀತಾದ್ರೆ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಲಿದ್ದು, 500 ಕೋಟಿ ಹಗರಣದಲ್ಲೂ ಮುನಿರತ್ನ ವಿರುದ್ಧ FIR ದಾಖಲಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಬೆಂಗಳೂರು : 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ – ರೇಡ್ ವೇಳೆ ಸಿಗ್ತು ಎಣ್ಣೆ ಬಾಟಲಿ, ಗಾಂಜಾ, ಲಕ್ಷ-ಲಕ್ಷ ಹಣ..!